Thursday, May 8, 2025
Google search engine

Homeರಾಜ್ಯಸುದ್ದಿಜಾಲಸಾಲಿಗ್ರಾಮ ಜನರಿಗೆ ದಾಖಲೆಗಾಗಿ ಕೆ.ಆರ್.ನಗರಕ್ಕೆ ನಿತ್ಯದ ಓಡಾಟ: ಆಡಳಿತ ನಿರ್ಲಕ್ಷ್ಯಕ್ಕೆ ಸಾರ್ವಜನಿಕರಿಂದ ಆಕ್ರೋಶ

ಸಾಲಿಗ್ರಾಮ ಜನರಿಗೆ ದಾಖಲೆಗಾಗಿ ಕೆ.ಆರ್.ನಗರಕ್ಕೆ ನಿತ್ಯದ ಓಡಾಟ: ಆಡಳಿತ ನಿರ್ಲಕ್ಷ್ಯಕ್ಕೆ ಸಾರ್ವಜನಿಕರಿಂದ ಆಕ್ರೋಶ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಪಟ್ಟಣದ ತಾಲೂಕು ಕಛೇರಿಯಲ್ಲಿರುವ ಜನನ ಮತ್ತು ಮರಣ ನೋಂದಣಿ ಕಛೇರಿಗೆ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕಿನ ಜನರು ನಿತ್ಯ ಅಲೆಯಬೇಕಾದ ಪರಿಸ್ಥಿತಿ ಎದುರಾಗಿದೆ.

ಕಳೆದ ನಾಲ್ಕು ವರ್ಷಗಳ ಹಿಂದೆ ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರಕ್ಕೆ ಸೇರಿದ ಸಾಲಿಗ್ರಾಮ ಹೋಬಳಿ ಕೇಂದ್ರಕ್ಕೆ ಚುಂಚನಕಟ್ಟೆ ಮತ್ತು ಮಿರ್ಲೆ ಹೋಬಳಿಗಳನ್ನು ಸೇರಿ ಪ್ರತ್ಯೇಕ ತಾಲೂಕನ್ನಾಗಿ ಘೋಷಣೆ ಮಾಡಿ ಅಸ್ತಿತ್ವಕ್ಕೆ ತರಲಾಯಿತು.

ಆನಂತರ ಎರಡು ತಾಲೂಕುಗಳಿಗೆ ಪ್ರತ್ಯೇಕವಾಗಿ ಜನನ ಮತ್ತು ಮರಣ ನೊಂದಣಿ ಕಛೇರಿಯನ್ನು ಆರಂಭಿಸಲು ಜಿಲ್ಲಾಡಳಿತ ಆದೇಶ ಹೊರಡಿಸಿದ ನಂತರ ಸಾಲಿಗ್ರಾಮ ತಾಲೂಕಿಗೆ ಸೇರಿದ ದಾಖಲೆಗಳನ್ನು ಹಸ್ತಾಂತರ ಮಾಡಲಾಗಿತ್ತು ಆದರೆ ಈ ಹಿಂದೆ ಹೊಸ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಹಶೀಲ್ದಾರರು ತಮ್ಮ ತಾಲೂಕಿನ ಕಛೇರಿಯ ಕಡತಗಳನ್ನು ಕೆ.ಆರ್.ನಗರಕ್ಕೆ ವರ್ಗಹಿಸಿದ್ದರು. ಅಂದಿನಿAದ ಈವರೆಗೂ ಸಾಲಿಗ್ರಾಮ ತಾಲೂಕಿನ ಮೂರು ಹೋಬಳಿಗಳ ವ್ಯಾಪ್ತಿಯ ನಾಗರೀಕರು ಜನನ ಮತ್ತು ಮರಣಗಳ ದಾಖಲೆಗಳ ಪ್ರಮಾಣ ಪತ್ರ ಪಡೆಯಲು ತಿಂಗಳು ಗಟ್ಟಲೆ ಕೆ.ಆರ್.ನಗರದ ಕಛೇರಿಗೆ ಅಲೆಯಬೇಕಿದ್ದು ಸಕಾಲದಲ್ಲಿ ದಾಖಲೆ ಸಿಗದೆ ಪರದಾಡುವಂತಾಗಿದೆ.

ಸಮಸ್ಯೆಯನ್ನು ಅರಿತು ನಾಗರೀಕರ ಅನುಕೂಲಕ್ಕೆ ಬರಬೇಕಾದ ಚುನಾಯಿತ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರ್ಲಕ್ಷö್ಯ ವಹಿಸಿದ್ದು ಇದರಿಂದ ಸಾರ್ವಜನಿಕರು ತಮ್ಮ ಕೆಲಸಗಳಿಗೆ ಕಛೇರಿಗೆ ನಿತ್ಯ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು ಈಗಲಾದರೂ ನಮ್ಮ ಸಮಸ್ಯೆಗೆ ಸಂಬoಧಿತರು ಸ್ಪಂದಿಸಬೇಕೆ0ದು ನಾಗರೀಕರು ಕೋರಿದ್ದಾರೆ.


ಕೆ.ಆರ್. ನಗರ ಸಾಲಿಗ್ರಾಮ ತಾಲೂಕು ಕೇಂದ್ರಕ್ಕೆ ಪ್ರತ್ಯೇಕವಾಗಿ ಜನನ ಮತ್ತು ಮರಣಗಳ ದಾಖಲೆ ನೀಡುವ ನೋಂದಣಿ ಕೇಂದ್ರ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಈಗಾಗಲೇ ನಾನು ಸರ್ಕಾರಕ್ಕೆ ಪತ್ರ ಬರೆದಿದ್ದು ಶೀಘ್ರದಲ್ಲಿಯೆ ಕಛೇರಿ ಆರಂಭಿಸಿ ಅಲಿನ ಜನತೆಗೆ ಆಗುತ್ತಿರುವ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳುತ್ತೇನೆ.
ಡಿ.ರವಿಶಂಕರ್ ಶಾಸಕರು, ಕೆ.ಆರ್.ನಗರ

RELATED ARTICLES
- Advertisment -
Google search engine

Most Popular