Friday, April 4, 2025
Google search engine

Homeರಾಜ್ಯಸುದ್ದಿಜಾಲಸಾಲಿಗ್ರಾಮ:ಕರ್ನಾಟಕ ಸಮತ ಸೈನಿಕ ದಳ (kssd) ನೂತನ ಪದಾಧಿಕಾರಿಗಳ ಆಯ್ಕೆ

ಸಾಲಿಗ್ರಾಮ:ಕರ್ನಾಟಕ ಸಮತ ಸೈನಿಕ ದಳ (kssd) ನೂತನ ಪದಾಧಿಕಾರಿಗಳ ಆಯ್ಕೆ

ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕರ್ನಾಟಕ ಸಮತ ಸೈನಿಕ ದಳ (kssd) ಸಾಲಿಗ್ರಾಮ ತಾಲೂಕಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಜಿಲ್ಲಾಧ್ಯಕ್ಷರಾದ ಅರಂಗೋ ಗೋವಿಂದರಾಜುರವರು ಮಾತನಾಡಿ ಹಲವಾರು ಸಂಘಟನೆಗಳು ಚುನಾವಣೆ ಸಂದರ್ಭದಲ್ಲಿ ಬರುತ್ತದೆ ನಂತರ ಕೆಲವು ಸಂಘಟನೆಗಳು ನಶಿಸಿ ಹೋಗುತ್ತವೆ ಆದರೆ ಕರ್ನಾಟಕ ಸಮತಾ ಸೈನಿಕ ದಳ ಸಂಘಟನೆಯು ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಸ್ವತಹ ಸ್ಥಾಪಿಸಿದ ಸಂಘಟನೆ ಆಗಿರುವುದರಿಂದ ಈ ಸಂಘಟನೆ ನಿರಂತರವಾಗಿ ಶೋಷಿತ ವರ್ಗಕ್ಕೆ ನ್ಯಾಯ ಕೊಡಿಸುವಲ್ಲಿ ಮುಂಚೂಣಿಯಲ್ಲಿ ಇರುತ್ತದೆ ಎಂದು ತಿಳಿಸಿದರು.

ಸಾಲಿಗ್ರಾಮ ಪುರಿ ಗೋವಿಂದರಾಜರವರು ಮಾತನಾಡಿ ಈ ಸಂಘಟನೆ ತುಳಿತಕ್ಕೆ ಒಳಗದ ಶೋಷಿತರ ಪರವಾಗಿ ನ್ಯಾಯ ಕೊಡಿಸೋಕೆ ನಾವು ಮತ್ತು ನಮ್ಮ ಸಂಘಟನೆಯವರು ನಿಮ್ಮ ಜೊತೆಗಿರುತ್ತೇವೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸಾಲಿಗ್ರಾಮ ತಾಲೂಕು ಅಧ್ಯಕ್ಷರಾಗಿ ಈರಯ್ಯ, ತಾಲೂಕ್ ಉಪಾಧ್ಯಕ್ಷರಾಗಿ ಹೆಬ್ಸೂರ್ ಸಣ್ಣಯ್ಯ, ಮಹಿಳಾ ಘಟಕದ ತಾಲೂಕು ಉಪಾಧ್ಯಕ್ಷರಾಗಿ ಲಕ್ಷ್ಮಿ, ಹಾಗೂ ಸಾಲಿಗ್ರಾಮ ಟೌನ್ ಅಧ್ಯಕ್ಷರಾಗಿ ಜಯಮ್ಮ,ಉಪಾಧ್ಯಕ್ಷರಾಗಿಲಕ್ಷ್ಮಮ್ಮ,ಖಜಾಂಚಿ ಪುಟ್ಟಮ್ಮ, ಕಾರ್ಯದರ್ಶಿಯಾಗಿ ಜಯಮ್ಮ, ಸಹ ಕಾರ್ಯದರ್ಶಿ ಲಕ್ಷ್ಮಿ, ಸಾಲಿಗ್ರಾಮ ಟೌನ್ ಗೌರವಾಧ್ಯಕ್ಷರು ಶ್ರೀನಿವಾಸ, ಅಧ್ಯಕ್ಷರು ರಾಜಯ್ಯ, ಉಪಾಧ್ಯಕ್ಷರು ಜವರಯ್ಯ, ಖಜಾಂಚಿ ತೀರ್ಥಯ್ಯ ರವರನ್ನು ಆಯ್ಕೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಹೊನ್ನೇನಹಳ್ಳಿ ರಾಜಯ್ಯ, ಎನ್ ಆರ್ ಎಸ್ ಜೆ ಸಿ ಸಾಲಿಗ್ರಾಮ ತಾಲೂಕ ಅಧ್ಯಕ್ಷ ಬೆಟ್ಟಹಳ್ಳಿ ಸಣ್ಣಯ್ಯ , ಎನ್ ಆರ್ ಎಸ್ ಜೆ ಸಿ ಕೆ ಆರ್ ನಗರ ತಾಲೂಕ್ ಅಧ್ಯಕ್ಷ ಗಳಿಗೆ ಕೆರೆ ಬಸವಯ್ಯ, ಹಂಪಾಪುರದ ಭರತ್, ಎಸ್‌ಎಸ್‌ಡಿ ಜಿಲ್ಲಾ ಉಪಾಧ್ಯಕ್ಷರು ಮಂಜುನಾಥ, ಕಾರ್ಯದರ್ಶಿ ಮರಿಸ್ವಾಮಿ,ಟಿ ಜಿಲ್ಲಾ ಖಜಾಂಚಿ ವೀರಭದ್ರ, ಎಸ್ ಎಸ್ ಡಿ ಮೈಸೂರ್ ತಾಲೂಕ ಅಧ್ಯಕ್ಷರು ಮಹೇಶ್ ಹಾಗೂ ಇತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular