ಹೊಸೂರು: ಇತ್ತೀಚೆಗೆ ಸತತವಾಗಿ ದಿನನಿತ್ಯ ಸುರಿದ ಮಳೆಯಿಂದಾಗಿ ಸಾಲಿಗ್ರಾಮ ತಾಲೂಕಿನ ತಂದ್ರೆ ಕೊಪ್ಪಲು ಗ್ರಾಮದಲ್ಲಿ ವಾಸದ ಮನೆಯೊಂದು ಮುರಿದು ಬಿದ್ದಿರುವ ಘಟನೆ ನಡೆದಿದೆ. ಗ್ರಾಮದ ಕರೀಗೌಡ ಎಂಬುವರಿಗೆ ಸೇರಿದ ವಾಸದ ಮನೆ ಮುರಿದು ಬಿದ್ದಿದ್ದು ಇದರಿಂದ ಇವರಿಗೆ ಅಪಾರ ನಷ್ಟ ಉಂಟಾಗಿದೆ.
ಮನೆಯ ಗೋಡೆಗಳು ಹಾಗೂ ಮೇಲ್ ಛಾವಣಿಗಳು ನೆಲಕ್ಕೆ ಉರುಳಿ ಬಿದ್ದಿವೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಪಾಯವಾಗಿಲ್ಲ. ಘಟನಾ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಪಾಪೇಗೌಡ ಭೇಟಿ ನೀಡಿ ಕುಟುಂಬದವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಕರೀಗೌಡರ ಕುಟುಂಬಕ್ಕೆ ತಾಲೂಕು ಆಡಳಿತವು ನೆರವು ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.