Saturday, April 19, 2025
Google search engine

Homeರಾಜ್ಯಸುದ್ದಿಜಾಲಸಾಲಿಗ್ರಾಮ, ಕೆ ಆರ್ ನಗರ ತಾಲೂಕು ಮಟ್ಟದ ಜನಸಂಪರ್ಕ ಸಭೆ ಮುಂದೂಡಿಕೆ:ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ

ಸಾಲಿಗ್ರಾಮ, ಕೆ ಆರ್ ನಗರ ತಾಲೂಕು ಮಟ್ಟದ ಜನಸಂಪರ್ಕ ಸಭೆ ಮುಂದೂಡಿಕೆ:ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ

ವರದಿ : ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಜೂ, 29 ರಂದು ಶನಿವಾರ ಪಟ್ಟಣದಲ್ಲಿ ಶಾಸಕ ಡಿ. ರವಿಶಂಕರ್ ಅವರ ಅಧ್ಯಕ್ಷತೆ ಮತ್ತು ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯಬೇಕಿದ್ದ ಸಾಲಿಗ್ರಾಮ ಮತ್ತು ಕೆ ಆರ್ ನಗರ ತಾಲೂಕು ಮಟ್ಟದ ಜನಸಂಪರ್ಕ ಸಭೆಯನ್ನು ಮುಂದೂಡಲಾಗಿದೆ ಎಂದು ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ ತಿಳಿಸಿದರು.

ಜನ ಸಂಪರ್ಕ ಸಭೆ ನಡೆಸಲು ಎರಡು ತಾಲೂಕು ಆಡಳಿತದ ವತಿಯಿಂದ ಈಗಾಗಲೇ ಸಿದ್ಧತೆ ಕೈಗೊಳ್ಳಲಾಗಿತ್ತು ಆದರೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಬಂದ ಸೂಚನೆಯ ಮೇರೆಗೆ ಮುಂದಾಗಿದ್ದು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಪಟ್ಟಣದ ಆಡಳಿತ ಸೌದದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಂದೆ ಶಾಸಕರ ಜೊತೆ ಚರ್ಚಿಸಿ ಮತ್ತೆ ಜನ ಸಂಪರ್ಕ ಸಭೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ ಅವರು ಈಗಾಗಲೇ ಕಳೆದ ಒಂದು ತಿಂಗಳಿನಿಂದ ತಾಲೂಕಿನ ಅತ್ಯಂತ ನಡೆಯುತ್ತಿರುವ ವಿಶೇಷ ಕಂದಾಯ ಅದಾಲತ್ ಮುಂದುವರೆಯಲಿದ್ದು ರೈತರ ಅವನಿಗೆ ಆಧಾರ್ ಸಂಖ್ಯೆ ಜೋಡಣೆ ಸೇರಿದಂತೆ ಇತರ ಕೆಲಸಗಳನ್ನು ಮಾಡಲಾಗುತ್ತಿದೆ ಎಂದರು.

ತಾಲೂಕಿನ ಅತ್ಯಂತ ಒತ್ತುವರಿಯಾಗಿರುವ ಕೆರೆಗಳನ್ನು ಗುರುತಿಸಿ ಸರ್ವೆ ಮಾಡಿಸಿದ್ದು ಕೆಲವನ್ನು ಈಗಾಗಲೇ ತೆರವು ಮಾಡಿಸಿದ್ದು ಉಳಿದ ಕೆರೆಗಳನ್ನು ತೆರವು ಮಾಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಇದರ ಜೊತೆಗೆ ಗ್ರಾಮೀಣ ಭಾಗಗಳಲ್ಲಿ ಇರುವ ಸರ್ಕಾರಿ ಭೂಮಿಯನ್ನು ಗುರುತು ಮಾಡಲಾಗಿದ್ದು ಅವುಗಳಿಗೆ ರಕ್ಷಣಾ ಬೇಲಿ ಸೇರಿದಂತೆ ಸರ್ಕಾರದ ನಾಮಫಲಕ ಹಾಕುವುದಾಗಿ ಮಾಹಿತಿ ನೀಡಿದರು.

ವಿಶೇಷ ಕಂದಾಯ ಆಂದೋಲನ ಜಾಗೃತಿಯಲ್ಲಿ ಸಾರ್ವಜನಿಕರು ಭಾಗವಹಿಸಿ ತಮ್ಮ ಜಮೀನುಗಳಿಗೆ ಸಂಬಂಧಿತ ದಾಖಲೆಗಳು ತಪ್ಪಾಗಿದ್ದರೆ ಅವುಗಳನ್ನು ಸರಿಪಡಿಸಿಕೊಳ್ಳಬೇಕೆಂದು ಮನವಿ ಮಾಡಿದ ತಹಸೀಲ್ದಾರರು ಈ ಸಂಬಂಧಿತ ಯಾವುದೇ ದೂರುಗಳಿದ್ದರೂ ತಮ್ಮನ್ನು ಸಂಪರ್ಕಿಸುವಂತೆ ಪ್ರಕಟಿಸಿದರು.

ಭವಿಷ್ಯದಲ್ಲಿ ಮಳೆಯಿಂದ ಜನ ಜಾನುವಾರು ಮತ್ತು ಮನೆಗಳಿಗೆ ಯಾವುದೇ ಹಾನಿಯಾದರೆ ಪರಿಹಾರ ಮತ್ತು ಸಹಾಯ ಮಾಡಲು ತಾ.ಪಂ.ಇಒ ಅವರ ಅಧ್ಯಕ್ಷತೆಯಲ್ಲಿ ಟಾಸ್ಕ್ ಪೋರ್ಸ್ ತಂಡ ರಚಿಸಿದ್ದು ಇದರೊಂದಿಗೆ ಪ್ರತಿ ಪಂಚಾಯತಿಗಳಲ್ಲಿಯೂ ತುರ್ತು ಸಮಿತಿಗಳು ಇರಲಿದ್ದು ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಗ್ರೇಡ್ -2 ತಹಸೀಲ್ದಾರ್ ಅವರಿಗೆ ಅಭಿನಂದನೆ

ಜೂನ್ 30 ರಂದು ತಮ್ಮ ಸುದೀರ್ಘ 36 ವರ್ಷಗಳ ಸೇವೆಯ ನಂತರ ನಿವೃತ್ತರಾಗುತ್ತಿರುವ ಗ್ರೇಡ್-2 ತಹಸೀಲ್ದಾರ್ ಬಾಲಸುಬ್ರಹ್ಮಣ್ಯ ಅವರಿಗೆ ಪತ್ರಕರ್ತರು ಮತ್ತು ತಾಲೂಕು ಕಛೇರಿಯ ಸಿಬ್ಬಂದಿ ಶುಭ ಹಾರೈಸಿದರು.

RELATED ARTICLES
- Advertisment -
Google search engine

Most Popular