Friday, April 11, 2025
Google search engine

Homeರಾಜ್ಯಸುದ್ದಿಜಾಲಸಾಲಿಗ್ರಾಮ: ನೂತನ ಅಧ್ಯಕ್ಷರಾಗಿ ಸತೀಶ್ ಅವಿರೋಧ ಆಯ್ಕೆ

ಸಾಲಿಗ್ರಾಮ: ನೂತನ ಅಧ್ಯಕ್ಷರಾಗಿ ಸತೀಶ್ ಅವಿರೋಧ ಆಯ್ಕೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಸಾಲಿಗ್ರಾಮ ಪಟ್ಟಣದ ಪ್ರಾಥಮಿಕ‌ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸತೀಶ್ ಅವಿರೋಧ ಆಯ್ಕೆಯಾದರು. ಸಂಘದ ಕಚೇರಿಯಲ್ಲಿ ಇಂದು ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಒಬ್ಬರೆ ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧ ಆಯ್ಕೆಯನ್ನು ಚುನಾವಣಾ ಅಧಿಕಾರಿ ಗಿರೀಶ್ ಪ್ರಕಟಿಸಿದರು.

ಈ ಹಿಂದೆ ಅಧ್ಯಕ್ಷರಾಗಿದ್ದ ಕರುಣಕುಮಾರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು. ಚುನಾವಣಾ ಪ್ರಕ್ರಿಯೆಯಲ್ಲಿ ನಿರ್ದೇಶಕರಾದ ಚಂದ್ರನಾಯಕ್, ಕರುಣಾಕುಮಾರ್, ನಾಗೇಂದ್ರ(ಪಾಪ), ಮಹೇಶ್, ಅಶೋಕ್, ರುಕ್ಮಿಣಮ್ಮ, ಸಣ್ಣದೇವಮ್ಮ, ಅಶ್ವಿನಿ, ಆನಂದ್, ಜಯರಾಮ್ ಇದ್ದರು. ಜೆಡಿಎಸ್ ಕಾರ್ಯಕರ್ತರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

RELATED ARTICLES
- Advertisment -
Google search engine

Most Popular