ನಟಿ ಸಂಯುಕ್ತಾ ಹೊರನಾಡು ಅವರು ಸಿನಿಮಾ ಕೆಲಸಗಳಲ್ಲಿ ಮಾತ್ರ ತೊಡಗಿಕೊಂಡಿರುವುದಲ್ಲದೆ ಅವರು ಸಾಮಾಜಿಕ ಕೆಲಸಗಳನ್ನೂ ಮಾಡುತ್ತಾ ಇರುತ್ತಾರೆ. ಇದೀಗ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿನ ಹುಲಿಯೊಂದನ್ನು ಅವರು ದತ್ತು ಪಡೆದಿದ್ದು ಈ ಮೂಲಕ ಅವರು ಎಲ್ಲರಿಗೂ ಮಾದರಿ ಆಗಿದ್ದಾರೆ. ಅವರ ಕೆಲಸಕ್ಕೆ ಎಲ್ಲ ಕಡೆಗಳಿಂದ ಶ್ಲಾಘನೆ ವ್ಯಕ್ತವಾಗಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿನ 2.5 ವರ್ಷದ ವಯಸ್ಸಿನ ಹುಲಿಯನ್ನ ನಟಿ ಸಂಯುಕ್ತ ಹೊರನಾಡು ದತ್ತು ಪಡೆದಿದ್ದಾರೆ. ಬೆಂಗಳೂರಿನ tekion ಸಂಸ್ಥೆ ಹಾಗೂ ನಟಿ ಸಂಯುಕ್ತ ಹೊರನಾಡು ಅವರು ಹುಲಿಯ ಆರೈಕೆಯ ಜವಾಬ್ದಾರಿ ಪಡೆದಿದ್ದಾರೆ. ಅವರಿಗೆ ಅರಣ್ಯ ಇಲಾಖೆ ಕಡೆಯಿಂದ ದತ್ತು ಪಡೆದ ಪ್ರಮಾಣ ಪತ್ರ ನೀಡಲಾಗಿದೆ.
ಕೊವಿಡ್ ಸಂದರ್ಭದಲ್ಲಿ ಪ್ರಾಣಿ ಸಂಗ್ರಹಾಲಯಗಳಿಗೆ ಯಾರೂ ಹೆಚ್ಚಾಗಿ ಭೇಟಿ ಕೊಟ್ಟಿರಲಿಲ್ಲ. ಇದರಿಂದ ಅವುಗಳ ಆರೈಕೆ ತುಂಬಾನೇ ಕಷ್ಟ ಆಗಿತ್ತು. ಆಗ ನಟ ದರ್ಶನ್ ಅವರು ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆಯಲು ಕರೆ ನೀಡಿದ್ದರು. ಇದಾದ ಬಳಿಕ ಅನೇಕರು ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆದಿದ್ದರು. ಈ ಮೂಲಕ ಅವುಗಳ ಸಹಾಯಕ್ಕೆ ನಿಂತರು.