ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ-2024ಕ್ಕೆ ತಯಾರಿ ಜೋರಾಗಿಯೇ ನಡೆಯುತ್ತಿದೆ. ಈಗಾಗಲೆ ಗಜಪಡೆ ಮೈಸೂರು ನಗರದಲ್ಲಿ ಪರೇಡ್ ಮಾಡುತ್ತಿದೆ. ಆನೆಗಳಿಗೆ ಇಂದಿನಿಂದ (ಸೆ.01) ಮರಳು ಮೂಟೆ ತಾಲೀಮು ಆರಂಭವಾಗಿದೆ.
ಮರಳು ಮೂಟೆ ಹೊರಿಸುವ ಮೂಲಕ ಜಂಬೂ ಸವಾರಿಗೆ ಆನೆಗಳನ್ನು ತಯಾರಿ ಮಾಡಲಾಗುತ್ತಿದೆ. ಆನೆಗಳಿಗೆ ಮರಳು ಮೂಟೆ ಹೊರಿಸುವ ಮುನ್ನ ಕೋಡಿ ಸೋಮೇಶ್ವರ ದೇವಸ್ಥಾನದ ಮುಂದೆ ವಿಶೇಷ ಪೂಜೆ ಸಲ್ಲಿಸಲಾಯಿತು.
ನಮ್ದಾ, ತೊಟ್ಟಿಲು, ಹಗ್ಗ ಹಾಗೂ ಮರಳು ಮೂಟೆಗೂ ಕೂಡ ಪೂಜೆ ಮಾಡಲಾಯಿತು. ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ ನೇತೃತ್ವದಲ್ಲಿ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು, ಲಕ್ಷ್ಮೀ, ವರಲಕ್ಷ್ಮೀ ಆನೆಗಳಿಗೆ ಪೂಜೆ ಮಾಡಲಾಯಿತು.