Friday, April 18, 2025
Google search engine

Homeಅಪರಾಧಬೆಂಗಳೂರಿನಲ್ಲಿ 5 ಕೋಟಿಗೂ ಅಧಿಕ ಮೌಲ್ಯದ ಗಂಧ ತುಂಡುಗಳು ಜಪ್ತಿ

ಬೆಂಗಳೂರಿನಲ್ಲಿ 5 ಕೋಟಿಗೂ ಅಧಿಕ ಮೌಲ್ಯದ ಗಂಧ ತುಂಡುಗಳು ಜಪ್ತಿ

ಬೆಂಗಳೂರು: ಬರೋಬ್ಬರಿ 5 ಕೋಟಿಗೂ ಅಧಿಕ ಮೌಲ್ಯದ ಗಂಧದ ತುಂಡುಗಳನ್ನು ಜಪ್ತಿ ಮಾಡಲಾಗಿದೆ.

ನಗರದಲ್ಲಿ ಗಂಧದ ದಂಧೆ ಮತ್ತೆ ಶುರುವಾಗಿದ್ದು ರಾಜ್ಯ ಅರಣ್ಯ ಜಾಗೃತದಳ ಸಿಬ್ಬಂದಿ ಗಂಧದ ಮರಗಳ ಕಳವು ಪ್ರಕರಣ ಭೇದಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ K.R.ಪುರದ ಐಟಿಐ ಫ್ಯಾಕ್ಟರಿ ಆವರಣದ ಗೋಡೌನ್​ ಮೇಲೆ ರಾಜ್ಯ ಅರಣ್ಯ ಜಾಗೃತದಳ ದಾಳಿ ನಡೆಸಿದ್ದು ಅಕ್ರಮವಾಗಿ ಸಂಗ್ರಹಿಸಿದ್ದ 2 ಕೋಟಿಗೂ ಹೆಚ್ಚು ಮೌಲ್ಯದ ಗಂಧದ ತುಂಡುಗಳನ್ನು ಪತ್ತೆ ಮಾಡಿ ಸೀಜ್ ಮಾಡಿದ್ದಾರೆ.

ಆರೋಪಿಗಳು ನೂರಾರು ಗಂಧದ ತುಂಡುಗಳನ್ನು ಸಂಗ್ರಹಿಸಿ ಅಕ್ರಮ ಸಾಗಾಟಕ್ಕ ಯತ್ನ ನಡೆಸಿದ್ದರು. ಸದ್ಯ ಈಗ ಆರೋಪಿಗಳನ್ನು ಬಂಧಿಸಿ ಗಂಧದ ತುಂಡು ಜಪ್ತಿ ಮಾಡಲಾಗಿದೆ. ಎರಡು ಟನ್​ಗೂ ಅಧಿಕ ಗಂಧದ ಮರಗಳನ್ನು ಮರಗಳ್ಳರು ಸಂಗ್ರಹಿಸಿದ್ದು ಹೇಗೆ? ಅಕ್ರಮ ಗಂಧದ ಮರಗಳು ಸರ್ಕಾರದ ಕಾರ್ಖಾನೆ ಸೇರಿದ್ದು ಹೇಗೆ? ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

RELATED ARTICLES
- Advertisment -
Google search engine

Most Popular