ಚಾಮರಾಜನಗರ: ಕಿತ್ತೂರು ಸಂಸ್ಥಾನದ ಉಳಿವಿಗಾಗಿ ಸರ್ವಸ್ವವನ್ನು ತ್ಯಾಗ ,ಬಲಿದಾನ ಮಾಡಿದ ಸಂಗೊಳ್ಳಿ ರಾಯಣ್ಣನ ದೇಶಭಕ್ತಿ, ದೇಶನಿಷ್ಟೇ ನಮ್ಮೆಲ್ಲರಿಗೂ ಮಾದರಿಯಾದದ್ದು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಸಂಗೊಳ್ಳಿ ರಾಯಣ್ಣ ಕೊಡುಗೆಗಳು ಕಾರ್ಯಕ್ರಮದಲ್ಲಿ ಮಾತನಾಡುತ್ತ ಬ್ರಿಟಿಷರ ವಿರುದ್ಧ ಬಂಡಾಯವನ್ನು ಸಾರಿದ ಸಂಗೊಳ್ಳಿ ರಾಯಣ್ಣ ಕಿತ್ತೂರು ಸಂಸ್ಥಾನದ ರಾಣಿ ಚೆನ್ನಮ್ಮಳ ನಂಬಿಕೆಯ ಸೇನಾನಿಯಾಗಿದ್ದ ರಾಯಣ್ಣನವರು ಅಸಮಾನ್ಯ ದೇಶಭಕ್ತರಾಗಿದ್ದರು. ಮಾತೃಭೂಮಿಗಾಗಿ ಬಂದನಕ್ಕೆ ಒ ಳಗಾಗಿದ್ದ ರಾಯಣ್ಣನು ತದನಂತರ ಕಾಡುಮೆಡುಗಳಲ್ಲಿ ಅಲೆದು ಬ್ರಿಟಿಷ ರಿಗೆ ಸಿಂಹ ಸ್ವಪ್ನವಾಗಿ ಹೋರಾಟ ನಡೆಸಿದ ರಾಯಣ್ಣನವರ ಇತಿಹಾಸ ಕನ್ನಡ ನಾಡಿಗೆ ಗೌರವ ತರುವ ಇತಿಹಾಸವಾಗಿದೆ. ಸಂಗೊಳ್ಳಿ ರಾಯಣ್ಣನವರು ಜನವರಿ 26ರಂದು ಬ್ರಿಟಿಷರಿಂದ ಗಲ್ಲು ಶಿಕ್ಷೆಗೆ ಒಳಗಾಗಿದ್ದರು. ಸೂರ್ಯ ಚಂದ್ರ ಇರುವರಿಗೂ ಸಂಗೊಳ್ಳಿ ರಾಯಣ್ಣರು ಕೋಟಿ ಕೋಟಿ ಯುವಕರಿಗೆ ದೇಶಭಕ್ತಿ ,ನಿಷ್ಠೆ ಮಾದರಿ ಎಂದ ಋಗ್ಬೇದಿ ಸಂಗೊಳ್ಳಿ ರಾಯಣ್ಣನ ಬಗ್ಗೆ ಹಳ್ಳಿ ಹಳ್ಳಿಗಳಲ್ಲೂ ವಿಚಾರಗಳನ್ನು ತಿಳಿಸುವ ಕಾರ್ಯವನ್ನು ಮಾಡಬೇಕು .ಯುವ ಪಡೆ ಸನ್ಮಾರ್ಗದಲ್ಲಿ ಅರ್ಪಿಸಿಕೊಳ್ಳುವ, ಅಭಿವೃದ್ಧಿ ಸಾಧಿಸುವ ದಿಕ್ಕಿನಲ್ಲಿ ಅವರ ದೇಶಭಕ್ತಿಯೇ ನಮಗೆ ದಾರಿ ದೀಪವಾಗಬೇಕು ಎಂದು ತಿಳಿಸಿದರು.
ನಿವೃತ್ತ ಮುಖ್ಯ ಶಿಕ್ಷಕ ಮಹದೇವ ಶೆಟ್ಟಿಯವರು ಸಂಗೊಳ್ಳಿ ರಾಯಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಸಲ್ಲಿಸಿ ಗೌರವ ಸಲ್ಲಿಸಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಾಹಿತ್ಯ, ಸಂಸ್ಕೃತಿ ಮತ್ತು ಕನ್ನಡ ನಾಡಿಗೆ ಕೊಡುಗೆ ನೀಡಿದ ಮಹಾತ್ಮರನ್ನು ಪ್ರತಿ ವಾರ ನೆನೆಸಿಕೊಳ್ಳುವ ಮೂಲಕ ಗೌರವ ತರುವ ಕಾರ್ಯವನ್ನು ಮಾಡುತ್ತಿರುವುದು ಬಹಳ ಸಂತೋಷವಾಗಿದೆ. ಸಂಗೊಳ್ಳಿ ರಾಯಣ್ಣ ಇತಿಹಾಸ ರೋಮಾಂಚನವಾದದ್ದು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯರಾದ ಸರಸ್ವತಿ, ಬಿಕೆ ಆರಾಧ್ಯ, ಶಿವಲಿಂಗಮೂರ್ತಿ, ರವಿಚಂದ್ರಪ್ರಸಾದ್, ಮೋಹನ್ ,ಸುದೀಪ್, ರಮೇಶ್ ,ರಘುನಾಥ್, ಚಂದ್ರಶೇಖರ್ ಮುಂತಾದವರು ಉಪಸ್ಥಿತರಿದ್ದರು.