ಚಳ್ಳಕೆರೆ:ಚಳ್ಳಕೆರೆ ತಾಲ್ಲೂಕಿನ ಸಾಣಿಕೆರೆ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ನಾಗರಾಜ್ ಅಧ್ಯಕ್ಷರಾಗಿ , ಟಿ ಶಶಿಕಲಾ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಅಧ್ಯಕ್ಷ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಗೆ ನಾಗರಾಜ್ ಮಾತ್ರ ನಾಮ ಪತ್ರ ಸಲ್ಲಿಸಿದರು. ಬೇರೆ ನಾಮಪತ್ರಗಳು ಸಲ್ಲಿಕೆಯಾಗದ ಕಾರಣ ಚುನಾವಣಾ ಅಧಿಕಾರಿ ಸಿ ಹರಿಪ್ರಸಾದ್ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಿ ಅವಿರೋಧ ಆಯ್ಕೆ ಪ್ರಕಟಿಸಿ ನಾಗರಾಜ್ ಗೆ ಅಧಿಕಾರ ವಹಿಸಿಕೊಟ್ಟರು.
20 ಜನ ಸದಸ್ಯ ಬಲ ಹೊಂದಿದ್ದ ಈ ಗ್ರಾಮ ಪಂಚಾಯಿತಿಯಲ್ಲಿ 19 ಮಂದಿ ಸದಸ್ಯರು ಹಾಜರಿದ್ದರು ಅನಾರೋಗ್ಯದ ಕಾರಣ ಒಬ್ಬ ಸದಸ್ಯರು ಗೈರು ಹಾಜರಾಗಿದ್ದರು. ಚುನಾವಣಾಧಿಕಾರಿ ಸಿ ಹರಿಪ್ರಸಾದ್ ಮಾತನಾಡಿ ಸದಸ್ಯರು ಮತ್ತು ಅಧ್ಯಕ್ಷರು ಪರಸ್ಪರ ಸಹಕಾರ ಮನೋಭಾವದಿಂದ ಕೆಲಸ ಮಾಡಿದರೆ ಸಾಕಷ್ಟು ಅಭಿವೃದ್ಧಿ ಸಾಧಿಸಿ ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ರೂಪಿಸಬಹುದು ಅಭಿವೃದ್ಧಿ ವಿಚಾರಗಳಲ್ಲಿ ರಾಜಕೀಯವನ್ನು ಬೆರಿಸಬಾರದೆಂದು ಎಲ್ಲರಿಗೂ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಿ ದೇವರಾಜು ಚುನಾವಣೆ ಅಧಿಕಾರಿ ಸಿ ಹರಿಪ್ರಸಾದ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಶ್ರುತಿ ಚಂದ್ರಕಾಂತ್, ಸದಸ್ಯರಾದ ತಿಪ್ಪೇರುದ್ರಪ್ಪ, ಎಸ್ ಸಿದ್ದಮ್ಮ, ಶಂಕರಲಿಂಗ, ಟಿ.ಶಶಿಕಲಾ, ಕೆಂಚ್ಚಮ್ಮ, ಶ್ರೀಧರ್, ವಿ. ಶೃತಿ, ವೀರಣ್ಣ. ಎಚ್ ಮಂಜುನಾಥ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.