ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ನ 26ನೇ ಗವರ್ನರ್ ಆಗಿ ಸಂಜಯ್ ಮಲ್ಹೋತ್ರ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು .
ಇಲ್ಲಿರುವ ಆರ್ಬಿಐನ ಪ್ರಧಾನ ಕಚೇರಿಗೆ ಬೆಳಿಗ್ಗೆ ಆಗಮಿಸಿದ ಅವರನ್ನು ಹಿರಿಯ ಅಧಿಕಾರಿಗಳು ಸ್ವಾಗತಿಸಿದರು.
ಬಳಿಕ ಅವರು ಅಧಿಕಾರ ಸ್ವೀಕರಿಸಿದರು. ಇತ್ತೀಚಿನವರೆಗೂ ಕಂದಾಯ ಕಾರ್ಯದರ್ಶಿಯಾಗಿದ್ದ ಮಲ್ಹೋತ್ರ ಅವರು ಇಂದು ದಾಖಲೆಗಳಿಗೆ ಸಹಿ ಹಾಕುವ ಮೂಲಕ ರ್‌ಬಿಐ ಗವರ್ನರ್ ಆಗಿ ಅಧಿಕಾರ ಸ್ವೀಕಾರ ಮಾಡಿದರು. ಆರ್ ಬಿ ಐ ಡೆಪ್ಯುಟಿ ಗವರ್ನರ್ ಗಳಾದ ಸ್ವಾಮಿನಾಥನ್ ಜೆ, ಎಂ ರಾಮೇಶ್ವರರಾವ್ ಹಾಗೂ ಟಿ ರಬಿಶಂಕರ್ ಅವರು ಈ ವೇಳೆ ಹಾಜರಿದ್ದರು.