ಸುಮಾರು 75 ಶಿಬಿರಾರ್ಥಿಗಳಿಗೆ ಕನ್ನಡಕ ವಿತರಣೆ
ಹುಣಸೂರು: ಆಸ್ಪತ್ರೆ, ವಿದ್ಯಾಸಂಸ್ಥೆಗಳು, ಇತ್ತೀಚೆಗೆ ಆದರ್ಶ ಮೌಲ್ಯಗಳ ಮರೆತು ಹಣದ ಹಿಂದೆ ಬಿದ್ದಿವೆ. ಅಂತವರ ನಡುವೆ ಬೆಂಗಳೂರು ಶಂಕರ ಕಣ್ಣಿನ ಆಸ್ಪತ್ರೆ ಮಾನವೀಯತೆ ಮೆರೆಯುತ್ತಿದೆ ಎಂದು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ 75 ಶಿಬಿರಾರ್ಥಿಗಳಿಗೆ ಸುಮಾರು ಎರಡು ಸಾವಿರದಿಂದ ಐದು ಸಾವಿರವರೆಗೆ ಬೆಲೆ ಬಾಳುವ ಕನ್ನಡಕ ವಿತರಿಸಿ ಮಾತನಾಡಿದ ಅವರು, ಪತ್ರಕರ್ತರು ಹಾಗೂ ಕುಟುಂಬದವರು, ಪತ್ರಿಕೆ ಹಂಚುವ ಮಕ್ಕಳು, ಆದಿವಾಸಿಗಳಿಗೆ ಈ ಉಚಿತ ಸೇವೆ ಸಿಕ್ಕಿರುವುದು ಸಂತದ ವಿಷಯವೆಂದರು.

ಆಸ್ಪತ್ರೆಯ ಮೇಲ್ವಿಚಾರಕರಾದ ಜಾಬಗೆರೆ ಮಂಜುನಾಥ್ ಮಾತನಾಡಿ , ಬೆಂಗಳೂರು ಶಂಕರ ಆಸ್ಪತ್ರೆಯು ನಮ್ಮ ಶಿಬಿರದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಉತ್ಕೃಷ್ಟ ಗುಣಮಟ್ಟದ ಕನ್ನಡಕ ಮತ್ತು ಶಸ್ತ್ರ ಚಿಕಿತ್ಸೆಗೆ ಒಳಪಡುವವರಿಗೆ ಪೊರೆ ಮಾತ್ರ ತೆಗೆಯದೆ, 50 ರಿಂದ 1.5 ಲಕ್ಷದವರೆಗೆ ಉಚಿತ ಶಸ್ತ್ರ ಚಿಕಿತ್ಸೆ ಮಾಡಲಾಗುವುದು ಅದನ್ನು ನಮ್ಮ ಭಾಗದ ಜನತೆ ಸದ್ಭಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಕನ್ನಡಕ ವಿತರಣೆ ಕಾರ್ಯಕ್ರಮದಲ್ಲಿ ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನೇರಳ ಕುಪ್ಪೆ ಮಹದೇವ್, ಕಾರ್ಯದರ್ಶಿ ಶಂಕರ್, ಖಜಾಂಚಿ ಯೋಗೇಶ್, ಹನಗೋಡು ನಟರಾಜ್, ದಾರಾ ಮಹೇಶ್, ಹಿರಿಯ ಸದಸ್ಯರಾದ, ಹೆಚ್.ಕೆ.ಕೃಷ್ಣ, ಕೆ.ಕೃಷ್ಣ, ಸ್ವಾಮೀಗೌಡ, ಚುಕ್ಕಿ ಮಹದೇವ್, ಜಯರಾಮ್, ದಯಾಕರ್, ಇದ್ದರು.