ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಮಾಜಿ ಸಚಿವರಾದ ಸಾರಾ ಮಹೇಶ್ ರವರು ಕೇಂದ್ರ ಬೃಹತ್ ಕೈಗಾರಿಕೆ ಸಚಿವರಾದಂತ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಕೆಆರ್ ನಗರದ ಹಳೆಯ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ರಕ್ಷಣಾ ದಳದ ತರಬೇತಿ ಕೇಂದ್ರವನ್ನು ಸ್ಥಾಪಿಸುವಂತೆ ದೆಹಲಿಗೆ ತೆರಳಿ ಮನವಿ ಸಲ್ಲಿಸಿದ್ದರು ಹಾಗೂ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದಂತಹ ವಿ ಸೋಮಣ್ಣನವರು ಮೈಸೂರಿಗೆ ಆಗಮಿಸಿದ ಸಂದರ್ಭದಲ್ಲಿ ಮನವಿ ಮಾಡಿದರ ಪರಿಣಾಮ ಈ ದಿನ ಮೈಸೂರು ರೈಲ್ವೆ ವಿಭಾಗದ ಮುಖ್ಯ ಅಭಿಯಂತರರಾದ ರಾಘವೇಂದ್ರರವರು ಹಾಗೂ ಕೆ ಆರ್ ನಗರ ಸೆಕ್ಷನ್ ಇಂಜಿನಿಯರ್ ದೇವರಾಜ ಗೌಡ್ರು ಕೃಷ್ಣರಾಜನಗರಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾದಂತಹ ಪ್ರಭಾಕರ್ ಜೈನ್ ಹಾಗೂ ಪುರಸಭಾ ಸದಸ್ಯರಾದ ಕೆ ಎಲ್ ಜಗದೀಶ್ ರವರು ಹಾಜರಿದ್ದರು ಈ ಸಂದರ್ಭದಲ್ಲಿ ಪ್ರಭಾಕರ್ ಜೈನ್ ರವರು ಮಾತನಾಡಿ ಈ ರೈಲ್ವೆ ಯೋಜನೆಯು ಅಂದಾಜು ಎರಡು ನೂರು ಕೋಟಿಯದ್ದಾಗಿದ್ದು ಅದರಲ್ಲಿ ರೈಲ್ವೆ ರಕ್ಷಣಾ ದಳದ ತರಬೇತಿ ಕಾಲೇಜು ಕಟ್ಟಡ ಹಾಗೂ ಕ್ರೀಡಾಂಗಣ ಮತ್ತು ಸಿಬ್ಬಂದಿಗಳ ವಸತಿ ಕಟ್ಟಡಗಳು ಹಾಗೂ ಶಿಬಿರಾರ್ಥಿಗಳಿಗೆ ಹಾಸ್ಟೆಲ್ ಕಟ್ಟಡಗಳು ನಿರ್ಮಾಣವಾಗಲಿದೆ ಎಂದು ತಿಳಿಸಿದರು