ಕೆ.ಆರ್.ಪೇಟೆ: ತಾಲ್ಲೋಕಿನ ಸಂತೇಬಾಚಹಳ್ಳಿ ಹೋಬಳಿಯ ಸಾರಂಗಿ ನಾಗರಾಜುರವರು ಮಂಡ್ಯ ಜಿಲ್ಲಾ ಸಹಕಾರ ಭಾರತಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ
ಮಂಡ್ಯ ನಗರದ ಕಮಲ ಮಂದಿರದಲ್ಲಿ ನಡೆದ ಸಹಕಾರ ಭಾರತಿ ಮಂಡ್ಯ ಜಿಲ್ಲೆಯ ಕಾರ್ಯಕಾರಿಣಿ ಸಭೆಯಲ್ಲಿ ಕೆ,ಆರ್ ಪೇಟೆ ಶಿವಜ್ಯೋತಿ ಗಾಣಿಗರ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷರಾಗಿರುವ ಸಾರಂಗಿ ನಾಗರಾಜುರವರು ಕೆ ಆರ್ ಪೇಟೆ ತಾಲ್ಲೋಕಿನಲ್ಲೂ ಬಿಜೆಪಿ ಓಬಿಸಿ ಮೋರ್ಚಾ ತಾಲ್ಲೋಕು ಅಧ್ಯಕ್ಷರಾಗಿಯು ಸೇವೆ ಸಲ್ಲಿಸುತ್ತಿರುವ ಜೊತೆಗೆ ತಮ್ಮ ಕೈಲಾದ ಸಮಾಜಸೇವೆಯನ್ನು ಮಾಡುತ್ತಿರುವ ಸಾರಂಗಿ ನಾಗರಾಜುರವರು ಮಂಡ್ಯ ಜಿಲ್ಲಾ ಸಹಕಾರ ಭಾರತಿ ನಿರ್ದೇಶಕರನ್ನಾಗಿ ಆಯ್ಕೆಯಾಗಿದ್ದಾರೆ ನನ್ನನ್ನು ಆಯ್ಕೆ ಮಾಡಿರುವ ಸಹಕಾರ ಭಾರತಿ ರಾಜ್ಯದ ಸಮಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ