ಮದ್ದೂರು: ತಾಲೂಕಿನ ಕೆ.ಹೊನ್ನಲಗೆರೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಸರಸ್ವತಿಚಿಕ್ಕಸೋಮಚಾರಿ ಅವಿರೋಧವಾಗಿ ಆಯ್ಕೆಯಾದರು.
ಹಿಂದಿನ ಅಧ್ಯಕ್ಷರಾಗಿದ್ದ ಗೌರಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಸರಸ್ವತಿ ಚಿಕ್ಕಸೋಮಚಾರಿ ಹೊರತು ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಇವರ ಆಯ್ಕೆಯನ್ನು ಚುನಾವಣಾಧಿಕಾರಿ ತಾಪಂ ಇಒ ರಾಮಲಿಂಗಯ್ಯ ಘೋಷಣೆ ಮಾಡಿದರು.
ನೂತನ ಅಧ್ಯಕ್ಷೆ ಸರಸ್ವತಿ ಚಿಕ್ಕಸೋಮಚಾರಿ ಮಾತನಾಡಿ, ಗ್ರಾಪಂಯ ಎಲ್ಲಾ ಸದಸ್ಯರ ವಿಶ್ವಾಸ ಪಡೆದು ರಸ್ತೆ, ಚರಂಡಿ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಗ್ರಾಪಂ ಸದಸ್ಯರಾದ ರಾಮಕೃಷ್ಣ, ಬೋರೇಶ್, ಮಹೇಂದ್ರ, ಈರಯ್ಯ, ಚಿಕ್ಕಕರಿಯಯ್ಯ, ಕಲಾವತಿ, ಜ್ಯೋತಿ, ವಿದ್ಯಾ, ಸುಶೀಲಮ್ಮ, ಮುಖಂಡರಾದ ಇಸ್ರೋ ರಾಮಣ್ಣ, ಅಂಕರಾಜು, ಕೆಂಗಲ್ಗೌಡ, ಜೆ.ಪುಟ್ಟಸ್ವಾಮಿ, ಶಿವಲಿಂಗಯ್ಯ, ವಿಶ್ವಾಸ್ ಸೇರಿದಂತೆ ಇತರರು ಹಾಜರಿದ್ದರು.