Saturday, October 4, 2025
Google search engine

Homeರಾಜ್ಯಸುದ್ದಿಜಾಲ30 ವರ್ಷಗಳಲ್ಲಿ 6000 ಹಾವು ಹಿಡಿದ ಸರದಾರ : ಯಾರೀ ಉರಗ ಪ್ರೇಮಿ

30 ವರ್ಷಗಳಲ್ಲಿ 6000 ಹಾವು ಹಿಡಿದ ಸರದಾರ : ಯಾರೀ ಉರಗ ಪ್ರೇಮಿ

ವರದಿ: ಸ್ಟೀಫನ್ ಜೇಮ್ಸ್

ಹಾವು ಎಂದರೇ ಹೌಹಾರಿಬಿಡ್ತೀವಿ. ಎದ್ನೋ ಬಿದ್ನೋ ಅಂತ ಓಡಿಬಿಡ್ತೀವಿ. ಆದರೇ, ಇಲ್ಲೊಬ್ಬ ವ್ಯಕ್ತಿ ಹಾವುಗಳನ್ನ ಸ್ನೇಹಿತರಂತೆ ನೋಡ್ತಾರೆ. ಅದ್ಯಾವುದೇ ಜಾತಿಯ ಹಾವೇ ಇರ್ಲಿ, ಸಂಕಷ್ಟದಲ್ಲಿದ್ದರೇ ಈತನೇ ಅವುಗಳ ಪಾಲಿಗೆ ವೆಂಕಟರಮಣ ಆಗಿದ್ದಾನೆ. ಹೀಗೆ ರೋಜ್ ಹಿಡಿಯೋ ರೀತಿ ಹಾವು ಹಿಡಿಯೋ ಉರಗ ಪ್ರೇಮಿ ಯಾರು ಗೊತ್ತಾ? ಇವರೇ ವಸಂತ್..

ವಸಂತ್ ಶಿಳ್ಳೆಕ್ಯಾತವರ.. ಕೊಪ್ಪಳ ಜಿಲ್ಲೆಯ ಕೆರಳ್ಳಿ ಗ್ರಾಮದವರು.. ವಸಂತ್ ಕಳೆದ 30 ವರ್ಷಗಳಲ್ಲಿ 6000 ಕ್ಕೂ ಹೆಚ್ಚು ಹಾವುಗಳನ್ನ ಹಿಡಿದು ಕಾಡಿಗೆ ಬಿಟ್ಟು ಬಂದಿದ್ದಾರೆ. ಹಾವುಗಳನ್ನ ಯಾವದೇ ಭಯವಿಲ್ಲದೆ ಅವುಗಳಿಗೆ ಅಪಾಯ ಆಗದಂತೆ ಅದರೊಂದಿಗೆ ಆಡುತ್ತಾ ಹಿಡಿಯುವದು ಇವರ ನಿತ್ಯ ಕಾಯಕ.

ವೃತ್ತಿಯಿಂದ ಕಟ್ಟಡ ನಿರ್ಮಾಣ ಕಾರ್ಮಿಕನಾಗಿದ್ದು ವಸಂತ ವನ್ಯ ಜೀವಿಗಳನ್ನು ಮತ್ತು ಹಾವುಗಳ್ಳನ್ನು ಅಪಾಯದಿಂದ ಪಾರು ಮಾಡಿ ಸಂರಕ್ಷಣೆ ಮಾಡುವುರಲ್ಲಿ ಖುಷಿ ಪಡುತ್ತಾರೆ. ಹಾವುಗಳು ಅಪಾಯದಲ್ಲಿ ಇವೆ ಅಂತ ಕರೆ ಮಾಡಿದ್ರೆ ಸಾಕು ವಸಂತ ಯಾವ ಪರಿಸ್ಥಿತಿಯಲ್ಲಿ ಇದ್ರು ಬಂದು ಹಾವುಗಳನ್ನ ಅಪಾಯದಿಂದ ಸಂರಕ್ಷಣೆ ಮಾಡಿ ಕಾಡಿಗೆ ಬಿಟ್ಟು ಸರೀಸೃಪ ಸ್ನೇಹಿ ಎಂದು ಪ್ರಖ್ಯಾತಿ ಹೊಂದಿದ್ದಾರೆ.

ವಸಂತ್​ ಅವರಿಗೆ ಇರುವ ವನ್ಯ ಜೀವಿ ಮತ್ತು ಹಾವುಗಳ ಮೇಲೆ ಇರುವ ಕಾಳಜಿ ಮತ್ತು ಸಂರಕ್ಷಣೆಯ ಗುಣವನ್ನ ಗುರುತಿಸಿ ಅರಣ್ಯ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದೆ. ಆಡು ಮೇಯದ ಸೊಪ್ಪು ಇಲ್ಲಾ ವಸಂತ ಹಿಡಿಯದು ಸಂರಕ್ಷಣೆ ಮಾಡದ ಹಾವುಗಳೇ ಇಲ್ಲಾ ಅಂತ್ಲೇ ಹೇಳಬಹುದು..

ಎಲ್ಲಾ ಬಗೆಯ ಹಾವುಗನ್ನು ಹಿಡಿದು ಅಳಿವಿನ ಅಂಚಿನಲ್ಲಿ ಇರುವ ಉರಗಗಳ ಸಂತತಿ ಕಾಪಾಡುತ್ತಿದ್ದಾರೆ ಉರಗ ಪ್ರೇಮಿ ವಸಂತ್.. ಸರೀಸೃಪ ಸ್ನೇಹಿ, ಉರಗ ಪ್ರೇಮಿ,ಉರಗ ಸಂರಕ್ಷಕ,ಬಿರುದು ಗಳಿಂದ ಕೊಪ್ಪಳದಲ್ಲಿ ಗುರುತಿಸಿ ಕೊಂಡಿದ್ದಾರೆ. ಹಲವಾರು ಸಂಘ ಸಂಸ್ಥೆಗಳು ಇವರ ಸೇವೆಯನ್ನು ಗುರುತಿಸಿ ವಿವೇಕಶ್ರೀ ಪ್ರಶಸ್ತಿ, ಸರೀಸೃಪ ಸ್ನೇಹಿ, ಉರಗ ಪ್ರೇಮಿಯಂದು ಸನ್ಮಾನಿಸಿ ಗೌರವಿಸವಿಸಿವೆ.

RELATED ARTICLES
- Advertisment -
Google search engine

Most Popular