ಚಾಮರಾಜನಗರ: ಮೈಸೂರು ಪ್ರಾಂತ್ಯದ ವಿಶೇಷ ಶ್ರೀ ಸುತ್ತೂರು ಕ್ಷೇತ್ರದ ಆಶಯದಲ್ಲಿ ನಡೆಯುವ ಶ್ರೀ ಸುತ್ತೂರು ಜಾತ್ರಾ ಮಹೋತ್ಸವ ವಿಶ್ವದ ಗಮನ ಸೆಳೆದಿದ್ದು ಸಂಸ್ಕೃತಿ, ಭಾವೈಕ್ಯತೆ, ಏಕತೆಯ ಉತ್ಸವವಾಗಿ ಎಲ್ಲ ಜನರನ್ನು ಒಂದುಗೂಡಿಸುವ ಆಧ್ಯಾತ್ಮಿಕ ಹಾಗೂ ಉನ್ನತ ಭಾವನೆಯನ್ನು ಮೂಡಿಸುವ ಉತ್ಸವವಾಗಿದೆ ಎಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದ್ದಾರೆ.
ಫೆಬ್ರವರಿ 6 ರಿಂದ 11 ರವರೆಗೆ ನಡೆಯುವ ಶ್ರೀ ಸುತ್ತೂರು ಜಾತ್ರೆ ಎಲ್ಲ ಕ್ಷೇತ್ರಗಳ ಅಧ್ಯಯನ ಹಾಗೂ ಇತಿಹಾಸ ,ಸಂಸ್ಕೃತಿ ,ಪರಂಪರೆ, ವಿಜ್ಞಾನ, ಅಭಿವೃದ್ಧಿ ,ಕೃಷಿ ,ಕೈಗಾರಿಕೆ ಜನಪದ ,ಸಾಹಿತ್ಯದ ಬಗ್ಗೆ ಅರಿಯಲು ಸಹಾಯಕವಾಗಿದೆ.
ಲಕ್ಷಾಂತರ ಜನರ ಭಾಗವಹಿಸುವಿಕೆಯ ಮೂಲಕ ಬಹುದೊಡ್ಡ ಉತ್ಸವ ಆಗಿರುವ ಸುತ್ತೂರು ಜಾತ್ರೆಗೆ ಶುಭಾಶಯವನ್ನು ಸುರೇಶ್ ಎನ್ ಋಗ್ವೇದಿ ಕೋರಿದ್ದಾರೆ.