ಕೊಡಗು: ಶನಿವಾರಸಂತೆಯಲ್ಲಿನ ಗಾಳಿ ಮಳೆಗೆ ಆಲೂರು ಸಿದ್ದಾಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ಮಾಲಂಬಿಯಲ್ಲಿ ಮನೆಯೊಂದು ಕುಸಿತವಾಗಿದೆ.
ಮಾಲಂಬಿ ಗ್ರಾಮದ ವೇದಾವತಿ ಮತ್ತು ಅಯ್ಯಪ್ಪ ಎಂಬುವವರ ಮನೆ ಗೋಡೆ ಸಂಪೂರ್ಣ ಕುಸಿದಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಭಾರೀ ಗಾಳಿಗೆ ಅಲ್ಲಲ್ಲಿ ಮರಗಳು, ವಿದ್ಯುತ್ ತಂತಿಗಳ ಮೇಲೆ ಬೀಳುತ್ತಿದ್ದು, ಗ್ರಾಮದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಶನಿವಾರದಿಂದ ಕಣಿವೆ ಬಸವನಹಳ್ಳಿ ಗ್ರಾಮದ ಕುಡಿಯುವ ನೀರು ಸರಬರಾಜು ಮಾಡುವ ಯಂತ್ರಕ್ಕೆ ವಿದ್ಯುತ್ ಇಲ್ಲದೆ ನೀರು ಸರಬರಾಜುವಿನಲ್ಲಿ ವ್ಯತ್ಯಯವಾಗಿದೆ.