ಪಿರಿಯಾಪಟ್ಟಣ: ತಾಲೂಕಿನ ಬೆಟ್ಟದಪುರ ಡಿಟಿಎಂಎನ್ ಪ್ರೌಢಶಾಲೆಯ ವಿದ್ಯಾರ್ಥಿನಿ ಸೌಜನ್ಯ ಆರ್ ಗೌಡ ಎಸ್ಎಸ್ಎಲ್ ಸಿ ಪರೀಕ್ಷೆ ಮರು ಮೌಲ್ಯಮಾಪನದಲ್ಲಿ 6 ಅಂಕ ಹೆಚ್ಚು ಪಡೆಯುವ ಮೂಲಕ ಒಟ್ಟು 616 ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಈ ಹಿಂದೆ ಬಂದಂತಹ ಎಸ್ಎಸ್ಎಲ್ ಸಿ ಫಲಿತಾಂಶದಲ್ಲಿ ಕನ್ನಡ 125 ಇಂಗ್ಲಿಷ್ 98 ಹಿಂದಿ 99 ಗಣಿತ 97 ವಿಜ್ಞಾನ 95 ಸಮಾಜ ವಿಷಯದಲ್ಲಿ 96 ಅಂಕ ಸೇರಿ ಒಟ್ಟು 610 ಅಂಕ ಪಡೆದಿದ್ದ ಸೌಜನ್ಯ ಆರ್ ಗೌಡ ತಾಲೂಕಿಗೆ ತೃತೀಯ ಸ್ಥಾನ ಗಳಿಸಿದ್ದರು, ಮರು ಮೌಲ್ಯಮಾಪನದಲ್ಲಿ ಇಂಗ್ಲಿಷ್ 99 ವಿಜ್ಞಾನ 98 ಸಮಾಜ ವಿಷಯದಲ್ಲಿ 98 ಅಂಕ ಪಡೆದು ಒಟ್ಟು 6 ಅಂಕ ಹೆಚ್ಚು ಪಡೆದು 616 ಅಂಕ ಗಳಿಸುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಕೀರ್ತಿಗೆ ಪಾತ್ರರಾಗಿದ್ದಾರೆ.
ಸೌಜನ್ಯ ಆರ್ ಗೌಡ ಡಿಟಿಎಂಎನ್ ವಿದ್ಯಾ ಸಂಸ್ಥೆಯ ಖಜಾಂಚಿ ಹಾಗೂ ಅರಕಲಗೂಡು ತಾಲೂಕಿನ ರುದ್ರಪಟ್ಟಣದ ಶ್ರೀ ವಿದ್ಯಾಶಂಕರ ಪ್ರೌಢಶಾಲೆಯ ಶಿಕ್ಷಕರಾದ ಪಿ.ರವಿ ಹಾಗೂ ಎಸ್.ಎಂ ಭಾನುಮತಿ ದಂಪತಿ ಪುತ್ರಿಯಾಗಿದ್ದು ವಿದ್ಯಾರ್ಥಿನಿ ಸಾಧನೆಗೆ ಬಿಇಓ ಬಸವರಾಜು, ಡಿಟಿಎಂಎನ್ ವಿದ್ಯಾಸಂಸ್ಥೆ ಅಧ್ಯಕ್ಷರಾದ ಚಂದ್ರಶೇಖರ್ ಹಾಗೂ ನಿರ್ದೇಶಕರು, ಆಡಳಿತಾಧಿಕಾರಿ ನಟರಾಜ್, ಪ್ರಾಂಶುಪಾಲರಾದ ಸತೀಶ್, ಪ್ರೌಢಶಾಲಾ ಮುಖ್ಯಶಿಕ್ಷಕ ಮುರಳಿ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಜರೀನಾ ಖಾನಮ್ ಹಾಗೂ ಬೋಧಕರು ಮತ್ತು ಬೋಧಕೆತರ ಸಿಬ್ಬಂದಿ ಮತ್ತು ವಿವಿಧ ಸಂಘ ಸಂಸ್ಥೆ ಹಾಗೂ ಶಿಕ್ಷಣಾಸಕ್ತರು ಅಭಿನಂದನೆ ತಿಳಿಸಿದ್ದಾರೆ.