ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಕುಪ್ಪೆ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಾಂಗ್ರೇಸ್ ಬೆಂಬಲಿತ
ಚಿಕ್ಕಕೊಪ್ಪಲು ಸಿ.ಟಿ.ಸವಲಿಸ್ವಾಮಿಗೌಡ ಸೋಮವಾರ ಅವಿರೋಧವಾಗಿ ಆಯ್ಕೆಯಾದರು. ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಿ.ಟಿ.ಸವಲಿಸ್ವಾಮಿಗೌಡ ಅವರನ್ನು ಹೊರತು ಪಡಿಸಿ ಬೇರೆಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ಸಂಘದ ಸಿ.ಇ.ಓ ಪುನೀತ್ ಇವರ ಅವಿರೋಧ ಅಯ್ಕೆಯನ್ನು ಪ್ರಕಟಿಸಿದರು
ಹಾಲಿ ಅಧ್ಯಕ್ಷರಾಗಿದ್ದ ಗೋಡೆ ದಾಸಯ್ಯ ಅವರ ರಾಜೀನಾಮೆ ಇಂದ ತೆರವಾದ ಸ್ಥಾನಕ್ಕೆ ಈ ಚುನಾವಣೆ ನಿಗಧಿಯಾಗಿತ್ತು ಚುನಾವಣೆಗೆ ಸಂಘದ ಸಹಾಯಕ ಸಿ.ಜಿ.ಜಗನ್ನಾಥ್ ಸಹಕಾರ ನೀಡಿದರು.
ನಂತರ ಜಿಲ್ಲಾ ಸಹಕಾರ ಬ್ಯಾಂಕಿನ ಅಧ್ಯಕ್ಷ ದೊಡ್ಡಸ್ವಾಮಿಗೌಡ ನೂತನ ಅಧ್ಯಕ್ಷರನ್ನು ಅಭಿನಂಧಿಸಿ ಮಾತನಾಡಿ ಸಂಘದ ನೂತನ ಕಟ್ಟಡ ನಿರ್ಮಾಣ ಮಾಡಲು ನಿವೇಶನ ಒದಗಿಸಿ ಕೊಟ್ಟರೆ ಜಿಲ್ಲಾ ಬ್ಯಾಂಕ್ ಮತ್ತು ಶಾಸಕ ಡಿ.ರವಿಶಂಕರ್ ಅವರಿಂದ ಅನುಧಾನ ಬಿಡುಗಡೆ ಮಾಡಿಸುವುದಾಗಿ ತಿಳಿಸಿದ ಅವರು ಸಂಘದಿಂದ ರೈತರಿಗೆ ಸಕಾಲದಲ್ಲಿ ಬೆಳೆ ಸಾಲ ಸೇರಿದಂತೆ ಇನ್ನಿತರೆ ಸಾಲ ಸೌಲಭ್ಯಗಳನ್ನು ಒದಗಿಸಿ ಕೊಡಲು ತಾವು ಶ್ರಮಿಸುತ್ತಿದ್ದು ನೂತನ ಅಧ್ಯಕ್ಷರು ಅಡಳಿತ ಮಂಡಳಿಯ ಸದಸ್ಯರು ಮತ್ತು ಷೇರುದಾರ ರೈತರ ವಿಶ್ವಾಸಕ್ಕೆ ತೆಗೆದು ಕೊಂಡು ಸಂಘದ ಅಭಿವೃದ್ದಿಗೆ ಶ್ರಮಿಸುವಂತೆ ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬ್ಯಾಂಕಿನ ಮೇಲ್ವಿಚಾರಕ ಮೂಡಲಕೊಪ್ಪಲು ದಿನೇಶ್, ಸಂಘದ ಉಪಾಧ್ಯಕ್ಷ ಪಟಾಕಿ ಸತೀಶ್, ಸದಸ್ಯರಾದ ಸಿ.ಬಿ.ಸಂತೋಷ್, ಪುನೀತಧನಪಾಲ್, ಮುದ್ದನಹಳ್ಳಿ ಸೋಮಪ್ಪ, ರುಕ್ಮಿಣಮ್ಮ, ಕಲ್ಯಾಣಮ್ಮ,ಕೆ.ಅರ್.ಮಂಜುನಾಥ್, ವಿಶ್ವೇಶ್ವರಯ್ಯ, ವಡ್ಡರಕೊಪ್ಪಲು ಕುಮಾರಸ್ವಾಮಿ, ಜವರನಾಯಕ,ಗೋಡೆದಾಸಯ್ಯ ಇದ್ದರು.
ನಂತರ ನೂತನ ಅಧ್ಯಕ್ಷರನ್ನು ಸಂಘದ ಮಾಜಿ ಅಧ್ಯಕ್ಷರಾದ ಡಿ.ರಾಮಕೃಷ್ಣೇಗೌಡ, ಸಿ.ಟಿ.ಪಾರ್ಥ, ಸುಬ್ಬೇಗೌಡ, ಮಾಜಿ ಗ್ರಾ.ಪಂ.ಅಧ್ಯಕ್ಷ ತಮ್ಮೇಗೌಡ, ಸದಸ್ಯರಾದ ಮಹೇಶ್, ಮಹೇಂದ್ರ, ರಾಜೇಗೌಡ ಗೋವಿಂದ ರಾಜು, ಕಾಂಗ್ರೇಸ್ ಮುಖಂಡರಾದ ಸಿ.ಎಸ್.ಗಿರೀಶ್, ಅರುಣ್ ಕಲ್ಲಹಟ್ಟಿ, ಯೋಗೇಶ್, ಮುದ್ದನಹಳ್ಳಿ ಹೇಮಂತ್, ಟೈಲರ್ ತಮ್ಮಯ್ಯ, ಉಪನ್ಯಾಸಕ ಪ್ರೋ.ಸಿ.ಡಿ.ಪರುಶುರಾಮ ಸೇರಿದಂತೆ ಮತ್ತಿತರರು ಅಭಿನಂದಿಸಿದರು.
ಸಾಲಿಗ್ರಾಮ ತಾಲೂಕಿನ ಕುಪ್ಪೆ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಾಂಗ್ರೇಸ್ ಬೆಂಬಲಿತ
ಚಿಕ್ಕಕೊಪ್ಪಲು ಸಿ.ಟಿ.ಸವಲಿಸ್ವಾಮಿಗೌಡ ಸೋಮವಾರ ಅವಿರೋಧವಾಗಿ ಆಯ್ಕೆಯಾದರು. ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಿ.ಟಿ.ಸವಲಿಸ್ವಾಮಿಗೌಡ ಅವರನ್ನು ಹೊರತು ಪಡಿಸಿ ಬೇರೆಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ಸಂಘದ ಸಿ.ಇ.ಓ ಪುನೀತ್ ಇವರ ಅವಿರೋಧ ಅಯ್ಕೆಯನ್ನು ಪ್ರಕಟಿಸಿದರು
ಹಾಲಿ ಅಧ್ಯಕ್ಷರಾಗಿದ್ದ ಗೋಡೆ ದಾಸಯ್ಯ ಅವರ ರಾಜೀನಾಮೆ ಇಂದ ತೆರವಾದ ಸ್ಥಾನಕ್ಕೆ ಈ ಚುನಾವಣೆ ನಿಗಧಿಯಾಗಿತ್ತು ಚುನಾವಣೆಗೆ ಸಂಘದ ಸಹಾಯಕ ಸಿ.ಜಿ.ಜಗನ್ನಾಥ್ ಸಹಕಾರ ನೀಡಿದರು.
ನಂತರ ಜಿಲ್ಲಾ ಸಹಕಾರ ಬ್ಯಾಂಕಿನ ಅಧ್ಯಕ್ಷ ದೊಡ್ಡಸ್ವಾಮಿಗೌಡ ನೂತನ ಅಧ್ಯಕ್ಷರನ್ನು ಅಭಿನಂಧಿಸಿ ಮಾತನಾಡಿ ಸಂಘದ ನೂತನ ಕಟ್ಟಡ ನಿರ್ಮಾಣ ಮಾಡಲು ನಿವೇಶನ ಒದಗಿಸಿ ಕೊಟ್ಟರೆ ಜಿಲ್ಲಾ ಬ್ಯಾಂಕ್ ಮತ್ತು ಶಾಸಕ ಡಿ.ರವಿಶಂಕರ್ ಅವರಿಂದ ಅನುಧಾನ ಬಿಡುಗಡೆ ಮಾಡಿಸುವುದಾಗಿ ತಿಳಿಸಿದ ಅವರು ಸಂಘದಿಂದ ರೈತರಿಗೆ ಸಕಾಲದಲ್ಲಿ ಬೆಳೆ ಸಾಲ ಸೇರಿದಂತೆ ಇನ್ನಿತರೆ ಸಾಲ ಸೌಲಭ್ಯಗಳನ್ನು ಒದಗಿಸಿ ಕೊಡಲು ತಾವು ಶ್ರಮಿಸುತ್ತಿದ್ದು ನೂತನ ಅಧ್ಯಕ್ಷರು ಅಡಳಿತ ಮಂಡಳಿಯ ಸದಸ್ಯರು ಮತ್ತು ಷೇರುದಾರ ರೈತರ ವಿಶ್ವಾಸಕ್ಕೆ ತೆಗೆದು ಕೊಂಡು ಸಂಘದ ಅಭಿವೃದ್ದಿಗೆ ಶ್ರಮಿಸುವಂತೆ ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬ್ಯಾಂಕಿನ ಮೇಲ್ವಿಚಾರಕ ಮೂಡಲಕೊಪ್ಪಲು ದಿನೇಶ್, ಸಂಘದ ಉಪಾಧ್ಯಕ್ಷ ಪಟಾಕಿ ಸತೀಶ್, ಸದಸ್ಯರಾದ ಸಿ.ಬಿ.ಸಂತೋಷ್, ಪುನೀತಧನಪಾಲ್, ಮುದ್ದನಹಳ್ಳಿ ಸೋಮಪ್ಪ, ರುಕ್ಮಿಣಮ್ಮ, ಕಲ್ಯಾಣಮ್ಮ,ಕೆ.ಅರ್.ಮಂಜುನಾಥ್, ವಿಶ್ವೇಶ್ವರಯ್ಯ, ವಡ್ಡರಕೊಪ್ಪಲು ಕುಮಾರಸ್ವಾಮಿ, ಜವರನಾಯಕ,ಗೋಡೆದಾಸಯ್ಯ ಇದ್ದರು.
ನಂತರ ನೂತನ ಅಧ್ಯಕ್ಷರನ್ನು ಸಂಘದ ಮಾಜಿ ಅಧ್ಯಕ್ಷರಾದ ಡಿ.ರಾಮಕೃಷ್ಣೇಗೌಡ, ಸಿ.ಟಿ.ಪಾರ್ಥ, ಸುಬ್ಬೇಗೌಡ, ಮಾಜಿ ಗ್ರಾ.ಪಂ.ಅಧ್ಯಕ್ಷ ತಮ್ಮೇಗೌಡ, ಸದಸ್ಯರಾದ ಮಹೇಶ್, ಮಹೇಂದ್ರ, ರಾಜೇಗೌಡ ಗೋವಿಂದ ರಾಜು, ಕಾಂಗ್ರೇಸ್ ಮುಖಂಡರಾದ ಸಿ.ಎಸ್.ಗಿರೀಶ್, ಅರುಣ್ ಕಲ್ಲಹಟ್ಟಿ, ಯೋಗೇಶ್, ಮುದ್ದನಹಳ್ಳಿ ಹೇಮಂತ್, ಟೈಲರ್ ತಮ್ಮಯ್ಯ, ಉಪನ್ಯಾಸಕ ಪ್ರೋ.ಸಿ.ಡಿ.ಪರುಶುರಾಮ ಸೇರಿದಂತೆ