ಚಾಮರಾಜನಗರ: ಅಂಡಮಾನ್ ದ್ವೀಪ ಸಮೂಹದಲ್ಲಿ ಘೋರ ಹಿಂಸೆಯನ್ನು ಅನುಭವಿಸಿ ,ಬ್ರಿಟಿಷರ ವಿರುದ್ಧ ವೀರ ಹೋರಾಟವನ್ನು ನಡೆಸಿದ ಸಾವರ್ಕರ್ ರವರ ಸಾಂಸ್ಕೃತಿಕ,ಸಾಮಾಜಿಕ ರಾಜಕೀಯ ಚಿಂತನೆಗಳು ಆದರ್ಶವಾಗಿದೆ ಎಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು,ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಜೈ ಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ ಯೂತ್ ಕ್ಲಬ್ ಜೈ ಹಿಂದ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ವೀರ ಸಾವರ್ಕರ್ ಜನ್ಮದಿನದಲ್ಲಿ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಪುಸ್ತಕ ಹಾಗೂ ಸಾವರ್ಕರ್ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಬ್ರಿಟಿಷರ ವಿರುದ್ಧ ಮೊಟ್ಟಮೊದಲ ವೀರ ಹೋರಾಟ ನಡೆಸಿದ ಭಾರತೀಯರ ಬಗ್ಗೆ 1857ರ ದಂಗೆಯನ್ನು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆದು ,ಇಡೀ ರಾಷ್ಟ್ರದ ಸರ್ವರನ್ನು ಭಾರತೀಯತೆ ಹಾಗೂ ರಾಷ್ಟ್ರ ಚಿಂತನೆಯನ್ನು ಮೂಡಿಸಿದ ವೀರಸಾವರ್ಕರ್ ಭಾರತೀಯ ಧರ್ಮವನ್ನು ಉಳಿಸಿ ಬೆಳೆಸುವ ದಿಕ್ಕಿನಲ್ಲಿ ಅಪಾರ ಕೊಡುಗೆ ನೀಡಿದ್ದಾರೆ .
ಭಾರತವನ್ನು ಪುಣ್ಯಭೂಮಿ ಎಂದು, ಸಮಸ್ತ ಚಿಂತನೆ ದೇಶಕ್ಕಾಗಿ ನನ್ನದು ಎಂಬುದು ಯಾವುದು ಇಲ್ಲ ಎಂದು ಲಕ್ಷ-ಲಕ್ಷ ಯುವಕರಲ್ಲಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಸ್ಪೂರ್ತಿಯನ್ನು ತುಂಬಿದವರು ಸಾವರ್ಕರ್. ಅಂಡಮಾನ್ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ ಸಾವರ್ಕರ್ ಜೈಲಿನಲ್ಲೂ ಹೋರಾಟ ನಡೆಸಿದ ಮಹಾನ್ ಸತ್ಯಾಗ್ರಹಿ. ಅಂಡಮಾನ್ ಜೈಲು ಇಂದಿಗೂ ರಾಷ್ಟ್ರೀಯ ಸ್ವಾತಂತ್ರ್ಯದ ಸ್ಮಾರಕವಾಗಿದೆ. ಸೆಲ್ಲುಲಾರ್ ಜೈಲಿನಲ್ಲಿ ವೀರ ಸಾವರ್ಕರ್ ದಶಕಗಳ ಕಾಲ ಇದ್ದ ಕೋಣೆ ಯಲ್ಲಿ ಸ್ವ ರಚಿಸಿದ ಕವನಗಳ ಬರವಣಿಗೆಯನ್ನು ಕಾಣಬಹುದಾಗಿದೆ ಎಂದು ಋಗ್ಬೇದಿ ತಿಳಿಸಿದರು.
ಜೈ ಹಿಂದ್ ಪ್ರತಿಷ್ಠಾನದ ಮಾರ್ಗದರ್ಶಕರಾದ ನಾಗ ಸುಂದರ್ ಮಾತನಾಡಿ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ನೂರಾರು ಹೋರಾಟಗಾರರನ್ನು ಅವರ ಇತಿಹಾಸವನ್ನು ತಿಳಿಯುವ ಮತ್ತು ಸ್ಮರಿಸಿಕೊಳ್ಳುವ ಕೆಲಸವನ್ನು ಎಲ್ಲರೂ ಸೇರಿ ಮಾಡೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ನಾಗೇಂದ್ರ ,ಜೈ ಹಿಂದ್ ಪ್ರತಿಷ್ಠಾನದ ಕುಸುಮ , ಸ್ಪೂರ್ತಿ, ರವಿಕುಮಾರ್ ಆಕಾಶ್,ಮಂಜು, ಶ್ರಾವ್ಯಋಗ್ವೇದಿ ಇದ್ದರು.