Wednesday, January 14, 2026
Google search engine

Homeರಾಜ್ಯಮನರೇಗಾ ಯೋಜನೆ ಉಳಿಸಿ ಎಂಬುದು ಜನರ ಆಂದೋಲನವಾಗಬೇಕು : ಸಿಎಂ ಸಿದ್ದರಾಮಯ್ಯ

ಮನರೇಗಾ ಯೋಜನೆ ಉಳಿಸಿ ಎಂಬುದು ಜನರ ಆಂದೋಲನವಾಗಬೇಕು : ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ಉಳಿಸಿ ಎಂಬುದು ಜನರ ಆಂದೋಲನವಾಗಬೇಕು ಮತ್ತು ಎಂಜಿಎನ್‌ಆರ್‌ಇಜಿಎ ಪುನಃಸ್ಥಾಪನೆಯಾಗುವವರೆಗೆ ಮತ್ತು ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್(ವಿಬಿ-ಜಿ ರಾಮ್ ಜಿ) ರದ್ದುಗೊಳಿಸುವವರೆಗೆ ಆಂದೋಲನ ಮುಂದುವರಿಯಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ನಡೆದ ‘ಎಂಜಿಎನ್‌ಆರ್‌ಇಜಿಎ ಬಚಾವೊ ಸಂಗ್ರಾಮ್’ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಮಹಾತ್ಮ ಗಾಂಧಿಯವರ ಹೆಸರೆಂದರೆ ಅಲರ್ಜಿ ಇದೆ ಎಂದು ಹೇಳಿದರು. ಅಲ್ಲದೆ ಎಂಜಿಎನ್‌ಆರ್‌ಇಜಿಎ ಮರುಸ್ಥಾಪನೆ ಆಂದೋಲನವು ಎನ್‌ಡಿಎ ಸರ್ಕಾರ ಮೂರು ಹೊಸ ಕೃಷಿ ಕಾನೂನುಗಳನ್ನು ತಂದಾಗ ಉತ್ತರ ಭಾರತವನ್ನು ಬೆಚ್ಚಿಬೀಳಿಸಿದ ರೈತರ ಪ್ರತಿಭಟನೆಯಂತೆಯೇ ಇರಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಎಐಸಿಸಿ ಕಾರ್ಯಕಾರಿ ಸಮಿತಿಯು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದ ಸಿಎಂ, ಡಾ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, ಗ್ರಾಮೀಣ ಭಾರತದ ಬಡವರಿಗೆ ಮೂಲಭೂತ ಹಕ್ಕುಗಳನ್ನು ಒದಗಿಸಲು ಎಂಜಿಎನ್‌ಆರ್‌ಇಜಿಎ ಕಾಯ್ದೆಯನ್ನು ಜಾರಿಗೆ ತರಲಾಯಿತು ಎಂದು ತಿಳಿಸಿದರು.

ಅಲ್ಲದೆ ಕಳೆದ 20 ವರ್ಷಗಳಲ್ಲಿ, ಎಂಜಿಎನ್‌ಆರ್‌ಇಜಿಎ ಮೂಲಕ 12.16 ಕೋಟಿಗೂ ಹೆಚ್ಚು ಜನರು ಉದ್ಯೋಗ ಪಡೆದಿದ್ದಾರೆ ಅದರಲ್ಲಿ 6.12 ಕೋಟಿ ಮಹಿಳೆಯರು ಎಂದು ಮಾಹಿತಿ ನೀಡಿದರು.

ಇನ್ನೂ ಈ ವೇಳೆ ವಿಬಿ-ಜಿ ರಾಮ್ ಜಿ ಜಾರಿ ತರುವ ಮೂಲಕ ಅವರು ಮತ್ತೆ ಮಹಾತ್ಮ ಗಾಂಧಿಯನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ. ಈ ರಾಮ್ ಸೀತಾ ರಾಮ ಅಥವಾ ದಶರಥ ರಾಮ್ಅಲ್ಲ, ಬದಲಿಗೆ ನಾಥುರಾಮ್ ಎಂದು ಹೇಳಿದ್ದು, ಹೊಸ ಮಸೂದೆಯೊಂದಿಗೆ, ರಾಜ್ಯ ಸರ್ಕಾರವು 40% ವೆಚ್ಚವನ್ನು ಭರಿಸಬೇಕಾಗುತ್ತದೆ, ಇದು ಸುಮಾರು 2,400 ಕೋಟಿ ರೂ.ಗಳಷ್ಟಾಗುತ್ತದೆ ಎಂದು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular