ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಕುಪ್ಪೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತರಾದ ಚಿಕ್ಕಕೊಪ್ಪಲು ಸವಿತಾ ಶ್ರೀನಿವಾಸ್ ಅವಿರೋಧವಾಗಿ ಆಯ್ಕೆಯಾದರು.
ಶನಿವಾರ ಗ್ರಾ.ಪಂ.ಆಡಳಿತ ಮಂಡಳಿಯ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸವಿತಾಶ್ರೀನಿವಾಸ್ ಅವರನ್ನು ಹೊರತುಪಡಿಸಿ ಬೇರೆಯಾರು ನಾಮ ಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾದರು.ಹಾಲಿ ಅಧ್ಯಕ್ಷೆಯಾಗಿದ್ದ ಗೀತಾದೀನೇಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಈ ಚುನಾವಣೆ ನಡೆಯಿತು.
ಚುನಾವಣಾಧಿಕಾರಿಯಾಗಿ ಕೆ.ಆರ್.ನಗರ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ಮಂಜುನಾಥ್ ಕಾರ್ಯನಿರ್ವಹಿಸಿದರು.
ನಂತರ ನಡೆದ ಸನ್ಮಾನ ಸಮಾರಂಭದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಸಿ.ಜೆ.ದ್ವಾರಕೀಶ್, ಜೆಡಿಎಸ್ ಮುಖಂಡ ಸಿ.ಬಿ.ಲೋಕೇಶ್, ಮಾಜಿ ಗ್ರಾ.ಪಂ.ಅಧ್ಯಕ್ಷ ತಿಮ್ಮೇಗೌಡ, ಯಶೋಧ ಮಹೇಶ್, ಮಾಜಿ ಸದಸ್ಯ ಸಿ.ಡಿ.ಪ್ರಭಾಕರ್, ಮುಖಂಡರಾದ ವೆಂಕಟೇಶ್,ಸಿ.ಟಿ.ಆನಂತ್,ಹೆಗ್ಗಡಿರವೀಶ,ಕುಮಾರ,ಗಾಂಧಿಚಂದ್ರ,ಪ್ರಭಾಕರ್, ಚೇತನ್, ಮಿಳ್ಳೆರಮೇಶ್,ಮನೋಹರ, ಮಂಚಿ ಮಾದ, ಲಕ್ಷ್ಮಿಪುರ ರಾಜೇಗೌಡ ಮತ್ತಿತಿತರು ನೂತನ ಅಧ್ಯಕ್ಷರನ್ನು ಅಭಿನಂಧಿಸಿದರು.
ನೂತನ ಅಧ್ಯಕ್ಷೆ ಸವಿತಾ ಶ್ರೀನಿವಾಸ್ ಮಾತನಾಡಿ ತಮ್ಮ ಅವಧಿಯಲ್ಲಿ ಕುಡಿಯುವನೀರು, ಸ್ವಚ್ಚತೆ, ಬೀದಿ ದೀಪಗಳ ನಿರ್ವಹಣೆಗೆ ಒತ್ತು ನೀಡುವುದರ ಜತಗೆ ಉದ್ಯೋಗ ಖಾತ್ರಿ ಯೋಜನೆಯನ್ನು ಸಂಪರ್ಕವಾಗಿ ಅನುಷ್ಠಾನ ಮಾಡಲು ಆಧ್ಯತೆ ನೀಡುವುದಾಗಿ ತಿಳಿಸಿದರು.
ಚುನಾವಣಾ ಸಭೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ಗೀತಾಕಾಂತರಾಜು, ಸದಸ್ಯರಾದ ಗೌರಮ್ಮ,ಗೀತಾದಿನೇಶ್,ಗಣೇಶ್,ಮಹೇಂದ್ರ,ಸಿ.ಜೆ.ಮಹೇಂದ್ರ, ರೇಖಾಉಮೇಶ್, ಸಿ.ಬಿ.ಧರ್ಮ, ಶಾರದಮ್ಮ,ಗೋವಿಂದೇಗೌಡ, ಪಿಡಿಓ ಯೋಗನಂದ್ ಮತ್ತಿತ್ತರು ಹಾಜರಿದ್ದರು.