ಕೆ.ಆರ್.ನಗರ: ತಾಲೂಕಿನ ದೊಡ್ಡೇಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸವಿತಾ ಸ್ವಾಮೀಗೌಡ ಅವಿರೋಧವಾಗಿ ಆಯ್ಕೆಯಾದರು.ಈವರೆಗೆ ಅಧ್ಯಕ್ಷರಾಗಿದ್ದ ಲಕ್ಷ್ಮಿರೇವಣ್ಣ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆಗೆ ಇವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ್ದರಿಂದ ಚುನಾವಣಾಧಿಕಾರಿಯಾಗಿದ್ದ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಎಸ್.ಎಂ.ಅಶೋಕ್ ಇವರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.ಚುನಾವಣಾ ಸಭೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ಕಾವ್ಯರಾಜು, ಸದಸ್ಯರಾದ ಬಿ.ಎಂ.ಗಿರೀಶ್, ಕೆ.ಪಿ.ಜಗದೀಶ್, ಮಹೇಶ್‌ಗೌಡ, ಶ್ವೇತಾರವಿ, ಚೌಕಹಳ್ಳಿಶೇಖರ್, ಮಾರ್ಕ್ಮಹದೇವ್, ಭಾಗ್ಯಕರೀಗೌಡ, ಸುಮಾರಾಜೇಶ್, ದೊಡ್ಡೇಕೊಪ್ಪಲುಕೃಷ್ಣ, ಮಹದೇವಮ್ಮ, ಸಾವಿತ್ರಮ್ಮ, ರಾಜೇಶ್ವರಿ, ನಂಜುoಡ, ಪಿಡಿಒ ರಮೇಶ್, ಕಾರ್ಯದರ್ಶಿ ಸೋಮಶೇಖರ್ ಹಾಜರಿದ್ದರು.
ಅನಂತರ ಶಾಸಕ ಡಿ.ರವಿಶಂಕರ್‌ರವನ್ನು ಭೇಟಿ ಮಾಡಿ ಅಧ್ಯಕ್ಷರನ್ನಾಗಿ ಆಯ್ಕೆಯಾಗಲು ಸಹಕರಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದ ಅವರು ಮುಂದಿನ ದಿನಗಳಲ್ಲಿ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ದಿಗೆ ಅನುದಾನ ನೀಡಬೇಕು ಎಂದು ಮನವಿ ಸಲ್ಲಿಸಿದರು.ಫಲಿತಾಂಶ ಪ್ರಕಟಗೊಂಡ ನಂತರ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಾಚರಿಸಿದರು. ಈ ಸಂಧರ್ಭದಲ್ಲಿ ಪಕ್ಷದ ಮುಖಂಡರಾದ ವೆಂಕಟರಾಮು, ಮಧುಕುಮಾರ್, ಕೆ.ಪಿ.ಮೋಹನ್, ಕೆಂದಪ್ಪ, ಶಿವರಾಜು, ಬಲರಾಮೇಗೌಡ, ಅಪ್ಪಾಜಿಗೌಡ, ಮಾಟೇಗೌಡ, ಜವರೇಗೌಡ, ಚನ್ನಕೇಶವ, ಪ್ರಕಾಶ್ ಮತ್ತಿತರರು ಹಾಜರಿದ್ದರು.