ಹೊಸೂರು : ಸಾಲಿಗ್ರಾಮ ತಾಲ್ಲೋಕಿನ ಮಾಯಿಗೌಡನಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಕಾಂಗ್ರೇಸ್ ಬೆಂಬಲಿತ ಸಾವಿತ್ರಮ್ಮ ,ಉಪಾಧ್ಯಕ್ಷರಾಗಿ ಕಗ್ಗಳಯಶೋಧಮ್ಮ ಅವಿರೋಧವಾಗಿ ಆಯ್ಕೆಯಾದರು.
ಶುಕ್ರವಾರ ಪಂಚಾಯತಿ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಾವಿತ್ರಮ್ಮ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಯಶೋಧಮ್ಮ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸಲಿಲ್ಲ.
ಇದರಿಂದ ಚುನಾವಣಾಧಿಕಾರಿ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎನ್. ಪ್ರಸನ್ನ ಅವರು ಇವರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.
ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆ ಪ್ರಕಟಿಸುತ್ತಿದ್ದಂತೆಯೇ ತಾಪಂ ಮಾಜಿ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ದಮ್ಮನಹಳ್ಳಿ ಉದಯ್ ಮಾಜಿ ಅಧ್ಯಕ್ಷರಾದಹಾಡ್ಯ ಮಹೇಶ್, ವೀರಭದ್ರಪ್ಪ, ಮಾಜಿ ಸದಸ್ಯ ಮಲ್ಲಿಕಾರ್ಜುನ,ಮುಖಂಡರಾದ ಅಶ್ವಥ,ಕಗ್ಗಳನಟೇಶ,ಕಾಂತರಾಜು,ಅಂಕನಹಳ್ಳಿ ಷಣ್ಮುಖ,ಯತೀಶ್,ಬೀರೇಗೌಡ ಅವರುಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಚುನಾವಣಾ ಸಭೆಯಲ್ಲಿ ಗಿರಿಜಮ್ಮ,ಕಾತ್ಯಾಯಿನಿ,ಮಾದೇವ,ವಂದನ,ದೊಡ್ಡೇಗೌಡ, ಯಶೋಧ, ಕುಮಾರಾಚಾರ್, ಚಂದ್ರಯ್ಯ, ಆಶಾ,ಕಮಲಮ್ಮ,ಗೌಡಯ್ಯ,ಕುಮಾರಸ್ವಾಮಿ,ಶೋಭಾ,ಪಿಡಿಒ ಧನಂಜಯ,ಕಾರ್ಯದರ್ಶಿ ತನುಶ್ರೀ ಹಾಜರಿದ್ದರು.