Tuesday, April 7, 2026
Google search engine

Homeಆರೋಗ್ಯಸೊಳ್ಳೆಗಳ ಕಾಟಕ್ಕೆ ಹೇಳಿ ಗುಡ್‌ ಬೈ : ಈ 'ಮ್ಯಾಜಿಕ್' ಮನೆಮದ್ದು ಟ್ರೈ ಮಾಡಿ!

ಸೊಳ್ಳೆಗಳ ಕಾಟಕ್ಕೆ ಹೇಳಿ ಗುಡ್‌ ಬೈ : ಈ ‘ಮ್ಯಾಜಿಕ್’ ಮನೆಮದ್ದು ಟ್ರೈ ಮಾಡಿ!

ಬೇಸಿಗೆ ಮತ್ತು ಮಳೆಗಾಲ ಬಂತೆಂದರೆ ಸಾಕು, ಮನೆಯೊಳಗೆ ಸೊಳ್ಳೆಗಳ ಸಾಮ್ರಾಜ್ಯವೇ ಶುರುವಾಗುತ್ತದೆ. ಇವುಗಳಿಂದ ಬಚಾವಾಗಲು ನಾವು ಮಾರುಕಟ್ಟೆಯಲ್ಲಿ ಸಿಗುವ ಕಾಯಿಲ್ ಅಥವಾ ಲಿಕ್ವಿಡ್‌ಗಳನ್ನು ಬಳಸುತ್ತೇವೆ. ಆದರೆ ಇವುಗಳಲ್ಲಿರುವ ರಾಸಾಯನಿಕಗಳು ಆರೋಗ್ಯಕ್ಕೆ ಹಾನಿಕಾರಕ. ಈ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಸೊಳ್ಳೆಗಳನ್ನು ಓಡಿಸಲು ಅತ್ಯಂತ ಸುಲಭ ಮತ್ತು ಅಗ್ಗದ ಉಪಾಯ ಇಲ್ಲಿದೆ.

ನಮ್ಮ ಮನೆಯಲ್ಲಿ ಕಸ ಎಂದು ಎಸೆಯುವ ವಸ್ತುಗಳಿಂದಲೇ ಈ ಅದ್ಭುತ ಮದ್ದನ್ನು ತಯಾರಿಸಬಹುದು ಎಂಬುದು ಇದರ ವಿಶೇಷತೆ.

ಬೇಕಾಗುವ ಸಾಮಗ್ರಿಗಳು:

ಬೇವಿನ ಒಣ ಎಲೆಗಳು,ಈರುಳ್ಳಿ ಮತ್ತು ಬೆಳ್ಳುಳ್ಳಿಯ ಸಿಪ್ಪೆ, 10-12 ಲವಂಗ,ಕೆಲವು ಪಲಾವ್ ಎಲೆ,
ಕರ್ಪೂರ, ಬೇವಿನ ಎಣ್ಣೆ ಅಥವಾ ಸಾಸಿವೆ ಎಣ್ಣೆ

ತಯಾರಿಸುವ ವಿಧಾನ :

ಪೌಡರ್ ತಯಾರಿ: ಮೊದಲು ಬೇವಿನ ಎಲೆ, ಈರುಳ್ಳಿ-ಬೆಳ್ಳುಳ್ಳಿ ಸಿಪ್ಪೆ, ಲವಂಗ ಮತ್ತು ಪಲಾವ್ ಎಲೆಯನ್ನು ಮಿಕ್ಸರ್ ಜಾರ್‌ಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ಎರಡು ಭಾಗಗಳಾಗಿ ವಿಂಗಡಿಸಿ.

ಈರುಳ್ಳಿಯ ದೀಪ : ಮೊದಲ ಭಾಗದ ಪುಡಿಗೆ ಸ್ವಲ್ಪ ಕರ್ಪೂರ ಬೆರೆಸಿ. ಈಗ ಒಂದು ದೊಡ್ಡ ಈರುಳ್ಳಿಯನ್ನು ತೆಗೆದುಕೊಂಡು ಅದರ ಮಧ್ಯಭಾಗವನ್ನು ಕೊರೆದು ‘ದೀಪ’ದ ಆಕಾರ ನೀಡಿ. ಅದರಲ್ಲಿ ಸಾಸಿವೆ ಅಥವಾ ಬೇವಿನ ಎಣ್ಣೆ ಹಾಕಿ, ಸಿದ್ಧಪಡಿಸಿದ ಪುಡಿಯನ್ನು ಬೆರೆಸಿ ಬತ್ತಿ ಇಟ್ಟು ಹಚ್ಚಿ. ಇದರ ವಾಸನೆಗೆ ಸೊಳ್ಳೆಗಳು ತಕ್ಷಣ ಓಡಿಹೋಗುತ್ತವೆ.

ನ್ಯಾಚುರಲ್ ರಿಫಿಲ್ (Refill): ಎರಡನೇ ಭಾಗದ ಪುಡಿಯನ್ನು ಎಣ್ಣೆಯೊಂದಿಗೆ ಬಾಂಡಲಿಯಲ್ಲಿ ಹಾಕಿ ಸಣ್ಣ ಉರಿಯಲ್ಲಿ ಕುದಿಸಿ. ಇದಕ್ಕೆ 2-3 ಕರ್ಪೂರದ ತುಂಡುಗಳನ್ನು ಸೇರಿಸಿ. ಎಣ್ಣೆ ಆರಿದ ನಂತರ ಸೋಸಿಕೊಂಡು, ಖಾಲಿಯಾದ ಹಳೆಯ ಲಿಕ್ವಿಡ್ ಮೆಷಿನ್ ಬಾಟಲಿಗೆ ತುಂಬಿಸಿ ಬಳಸಿ.

ಈ ನೈಸರ್ಗಿಕ ವಿಧಾನ ಏಕೆ ಶ್ರೇಷ್ಠ?

ಮಾರುಕಟ್ಟೆಯಲ್ಲಿ ಸಿಗುವ ಸೊಳ್ಳೆ ನಿವಾರಕಗಳಲ್ಲಿ ‘ಡಿ-ಅಲೆಥ್ರಿನ್’ (D-allethrin) ನಂತಹ ಅಪಾಯಕಾರಿ ರಾಸಾಯನಿಕಗಳಿರುತ್ತವೆ. ಇವು ಉಸಿರಾಟದ ತೊಂದರೆ ಮತ್ತು ತಲೆನೋವಿಗೆ ಕಾರಣವಾಗಬಹುದು. ಆದರೆ ಪೂನಂ ದೇವನಾನಿ ಅವರ ಈ ವಿಧಾನವು:

ಸಂಪೂರ್ಣ ಸುರಕ್ಷಿತ : ಮಕ್ಕಳು ಮತ್ತು ವೃದ್ಧರಿರುವ ಮನೆಗಳಿಗೆ ಇದು ಸೂಕ್ತ.

ಪರಿಸರ ಸ್ನೇಹಿ  : ಮನೆಯ ವಾತಾವರಣವನ್ನು ಶುದ್ಧೀಕರಿಸುತ್ತದೆ.

ಕಡಿಮೆ ಖರ್ಚು : ಕಸ ಎಂದು ಎಸೆಯುವ ವಸ್ತುಗಳಿಂದಲೇ ಇದನ್ನು ತಯಾರಿಸಬಹುದು.

ಗಮನಿಸಿ : ರಾಸಾಯನಿಕ ಮುಕ್ತ ಜೀವನಕ್ಕೆ ಇಂತಹ ಸಣ್ಣ ಪುಟ್ಟ ಬದಲಾವಣೆಗಳು ಆರೋಗ್ಯದ ದೃಷ್ಟಿಯಿಂದ ತುಂಬಾ ಸಹಕಾರಿ.

RELATED ARTICLES
- Advertisment -
Google search engine

Most Popular