- ವರದಿ: ಸತೀಶ್ ಆರಾಧ್ಯ
ಪಿರಿಯಾಪಟ್ಟಣ: ತಾಲೂಕು ವೀರಶೈವ ಲಿಂಗಾಯತ ನೌಕರ ಸಂಘದ ನೂತನ ಅಧ್ಯಕ್ಷರಾಗಿ ಎಸ್.ಸಿ ಪರಮಶಿವಯ್ಯ ಆಯ್ಕೆಯಾದರು.
ಈ ಹಿಂದೆ ಅಧ್ಯಕ್ಷರಾಗಿದ್ದ ಬಿ.ಸಿ ಮಹದೇವಪ್ಪ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಎಲ್ಲರ ಸರ್ವಾನುಮತ ಅಂಗೀಕಾರದೊಂದಿಗೆ ಪರಮಶಿವಯ್ಯ ಅವರು ಅವಿರೋಧ ಆಯ್ಕೆಯಾದರು.
ಇದೇ ವೇಳೆ ಖಜಾಂಚಿಯಾಗಿ ಲೋಕೇಶ್, ಕಾರ್ಯದರ್ಶಿಯಾಗಿ ನಂಜುಂಡಸ್ವಾಮಿ ಆಯ್ಕೆಯಾದರು. ಬಳಿಕ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಶುಭ ಕೋರಲಾಯಿತು. ಈ ವೇಳೆ ನೂತನ ಅಧ್ಯಕ್ಷರಾದ ಪರಮಶಿವಯ್ಯ ಅವರು ಮಾತನಾಡಿ ನನ್ನ ಮೇಲೆ ನಂಬಿಕೆ ಇಟ್ಟು ನೀಡಿರುವ ಹುದ್ದೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿ ಎಲ್ಲರ ಸಹಕಾರ ಕೋರಿದರು.
ಈ ಸಂದರ್ಭ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಸ್ ಮಹದೇವಪ್ಪ, ಶಿಕ್ಷಕರ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಶಿವಮೂರ್ತಿ, ಸಂಘದ ಉಪಾಧ್ಯಕ್ಷರಾದ ಬೇಬಿ, ಬಸವರಾಜು, ನಾಗೇಂದ್ರ ಆರಾಧ್ಯ, ಶಿವಪ್ಪ, ಮಲ್ಲೇಶ್, ವೀರೇಶ್, ಕಾಂತರಾಜ್, ಕೀರ್ತಿಕುಮಾರ್, ಮಲ್ಲಿಕಾರ್ಜುನ್, ಶಿವಕುಮಾರ್, ಸಂಗಮೇಶ್, ಯುವರಾಜ್ ಮತ್ತು ಸಂಘದ ಸದಸ್ಯರು ಇದ್ದರು.