ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಬಡವರ ಮಕ್ಕಳ ಶಿಕ್ಷಣಕ್ಕಾಗಿ ನಿರ್ಮಿಸಿದ್ದ ಶಾಲಾ ಕಟ್ಟಡವನ್ನು ರಾತ್ರೋರಾತ್ರಿ ಅಕ್ರಮವಾಗಿ ನೆಲಸಮ ಮಾಡಿ ಅತಿಕ್ರಮಣ ಪ್ರವೇಶ ಮಾಡುತ್ತಿದ್ದರು ಇದನ್ನು ತಡೆಗಟ್ಟುವಲ್ಲಿ ವಿಫಲವಾದ ಶಿಕ್ಷಣ ಇಲಾಖೆ ತಾಲೋಕ್ ಆಡಳಿತ ಗ್ರಾಮ ಪಂಚಾಯತಿ ಪೊಲೀಸ್ ಇಲಾಖೆ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸಾ ರಾ ನಂದೀಶ್ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಶಿಕ್ಷಣ ಇಲಾಖೆಯ ಡಿಡಿಪಿ ಮತ್ತು ಪೋಲಿಸ್ ವರಿಷ್ಟಾಧಿಕಾರಿ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸದಿದ್ದರೆ ಸಾಲಿಗ್ರಾಮ ಪಟ್ಟಣದ ಎಲ್ಲಾ ನಾಗರಿಕರ ಒಡಗೂಡಿ ಸರ್ಕಾರದ ಆಸ್ತಿ ಉಳಿವಿಗಾಗಿ ಉಗ್ರ ಹೋರಾಟ ಮಾಡುವುದಾಗಿ ಜಿಲ್ಲಾ ಪಂಚಾಯತ್ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಸಾರಾ ನಂದೀಶ್ ಅಧಿಕಾರಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿದರು.

ಸಾಲಿಗ್ರಾಮ ಪಟ್ಟಣದ ಹೃದಯ ಭಾಗದಲ್ಲಿರುವ ಶಿಕ್ಷಣ ಇಲಾಖೆಗೆ ನಂಜಮ್ಮ ಬೋರೇಗೌಡ ದಾನವಾಗಿ ನೀಡಿದ ಆರು ಎಕ್ಕರೆ ಎರಡು ಕುಂಟೆ ಭೂಮಿಯಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆ ಹಾಗು ಉರ್ದು
ಸಾಲಿಗ್ರಾಮ ಪಟ್ಟಣದ ಶಾಲಾ ಕೊಠಡಿ ದ್ವಂಸ ಪ್ರಕರಣಕ್ಕೆ ಸಂಬಂದಿಸಿದಂತೆ ಒರ್ವ ವ್ಯಕ್ತಿ ಹಾಗೂ ಆತನ ಸಹಚರರ ವಿರುದ್ದ ಈಗಾಗಲೆ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಶಾಲಾ ಮುಖ್ಯ ಶಿಕ್ಷಕರ ಮೂಲಕ ಕೇಸು ದಾಖಲಿಸಲಾಗಿದೆ. ಈ ಸಂಬಂದ ಘಟನೆ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಏನೂ ಹಳೇ ಶಾಲಾ ಆವರಣ ಒತ್ತುವರಿ ಮಾಡಿ ಕೊಂಡಿದ್ದವರನ್ನು ತೆರವು ಮಾಡಿಸಲು ಕ್ರಮ ವಹಿಸಲಾಗಿದೆ.– ಆರ್.ಕೃಷ್ಣಪ್ಪ, ಬಿಇಓ, ಕೆ.ಆರ್.ನಗರ.
ಇದು ಸರ್ಕಾರದ ಜಮೀನು ಅಲ್ಲ ನಮ್ಮೂರಿನ ಸಾಹುಕಾರ್ ದಿವಂಗತ ಬೋರಣ್ಣನವರ ಕುಟುಂಬ ಶಾಲೆ ತೆರೆಯಲು ನೀಡಿದ್ದು, ಮಕ್ಕಳ ಸಂಖ್ಯೆ ಕಡಿಮೆಯಾದ ಮೇಲೆ, ಶಾಲೆ ಮುಚ್ಚಲಾಗಿ ಬೇರೆಡೆ ಸ್ಥಳಾಂತರ ಮಾಡಲಾಗಿದೆ, ಉರ್ದು ಶಾಲೆ ಇಲ್ಲಿಯೇ ನಡೆಯುತ್ತಿದೆ.ಶಾಲೆಯ ಗೋಡೆ ಹೊಡೆದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳ ಬೇಕು, ಈ ಪ್ರಕರಣದಲ್ಲಿ ತಾಲ್ಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆ ಅಸಡ್ಡೆ ತೋರಿದೆ, ಶಾಲೆಯ ಕಟ್ಟಡ ಉಳಿಸುವ ಕಾರ್ಯವಾಗ ಬೇಕು, ನಮ್ಮ ಹಿರಿಯರು ಓದಿದ ಶಾಲಾ ಕೊಠಡಿಗಳು ಸಹ ಇದ್ದಾವೆ,
-ಸಾ.ರಾ.ನಂದೀಶ್, ಜಿ.ಪಂ.ಮಾಜಿ ಅಧ್ಯಕ್ಷರು.