ಮಂಗಳೂರು (ದಕ್ಷಿಣ ಕನ್ನಡ): ಇತ್ತೀಚಿಗೆ ಮಂಗಳೂರಿನ ಕೊಣಾಜೆ ಠಾಣಾ ವ್ಯಾಪ್ತಿಯ ಹರೇಕಳ ಗ್ರಾಮದ ನ್ಯೂಪಡ್ಪು ಶಾಲೆಯ ಆವರಣ ಗೋಡೆ ಕುಸಿದು ಏಳರ ಹರೆಯದ ಬಾಲಕಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರವು ಮೃತ ಬಾಲಕಿಯ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರ ನೀಡಿದೆ.
ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರ ಶಾಲೆಯಂದೇ ಗುರುತಿಸಲ್ಪಟ್ಟಿರುವ ಈ ನ್ಯೂಪಡ್ಪು ಶಾಲೆಯಲ್ಲಿ 3ನೇ ತರಗತಿಯಲ್ಲಿ ಕಲಿಯುತ್ತಿದ್ದ ಶಾಝಿಯಾ(7) ಮೇ 20ರಂದು ಸಂಜೆ ಶಾಲೆಯ ಗೇಟ್ ಸಮೇತ ಆವರಣ ಗೋಡೆ ಕುಸಿದು ಮೃತಪಟ್ಟಿದ್ದಳು.
ಸ್ಪೀಕರ್ ಯು.ಟಿ.ಖಾದರ್ ಅವರ ಶಿಫಾರಸಿನ ಮೇರೆಗೆ ಸರಕಾರದಿಂದ ಬಾಲಕಿಯ ತಾಯಿಯ ಬ್ಯಾಂಕ್ ಖಾತೆಗೆ ಐದು ಲಕ್ಷ ರೂ. ಪರಿಹಾರಧನ ಜಮೆಯಾಗಿದೆ.