ಗುಂಡ್ಲುಪೇಟೆ: ಪಟ್ಟಣದ ಶ್ರೀ ಮದ್ದಾನೇಶ್ವರ ವಿದ್ಯಾ ಸಂಸ್ಥೆಯಲ್ಲಿ ಶಾಲಾ ಸಂಸತ್ ಚುನಾವಣೆ ಶುಕ್ರವಾರ ನಡೆಯಿತು.
ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳ ಮಾದರಿಯಲ್ಲಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂತೆಗೆದುಕೊಳ್ಳವಿಕೆ, ಚುನಾವಣಾ ಪ್ರಚಾರ, ಮತದಾನ ಎಲ್ಲವೂ ವ್ಯವಸ್ಥಿತವಾಗಿ ಏರ್ಪಟ್ಟಿತ್ತು. ಪ್ರಜಾಪ್ರಭುತ್ವ ಎಂದರೇನು? ಮತದಾನದ ರೀತಿ ನೀತಿಗಳೇನು? ಮತದಾನ ಹೇಗೆ ಮಾಡಬೇಕು? ಸಂಸತ್ ಹೇಗಿರುತ್ತದೆ? ಮುಖ್ಯಮಂತ್ರಿಗಳ ಪ್ರಧಾನ ಮಂತ್ರಿಗಳ ಕೆಲಸ ಮಂತ್ರಿಗಳ ಕಾರ್ಯಗಳ ಕುರಿತು ಚುನಾವಣೆ ಮತ್ತು ಸಂಸತ್ ರಚನೆಯ ಮೂಲಕ ಎಲ್ಲದರ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ಪಡೆದರು.
ಮಕ್ಕಳಿಂದ ಮತದಾನ ನಡೆಯಿತು. ಮತಪತ್ರ ನೀಡುವಿಕೆ, ಶಾಹಿ ಹಚ್ಚುವಿಕೆ, ಸಹಿ ಮಾಡುವುದು, ಮತದಾನ ಮಾಡುವುದು ನಿಜವಾದ ಚುನಾವಣೆಯನ್ನು ನೆನಪಿಸಿದವು. ಐದರಿಂದ 10ನೇ ತರಗತಿಯ ವರೆಗಿನ 462ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಾಸುಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಗುಪ್ತ ಮತದಾನ ಮಾಡಿದರು ನಂತರ ಫಲಿತಾಂಶವನ್ನು ಪ್ರಕಟಗೊಳಿಸಲಾಯಿತು.
ಮುಖ್ಯ ಶಿಕ್ಷಕರಾದ ಎಂ.ಪ್ರಕಾಶ್ ಚುನಾವಣಾ ಅಧಿಕಾರಿಯಾಗಿ 12 ಜನ ಶಿಕ್ಷಕರು ಮತಗಟ್ಟೆ ಅಧಿಕಾರಿಗಳಾಗಿ ಒಬ್ಬರು ಸೆಕ್ಟರ್ ಆಫೀಸರ್ ಆಗಿ ಶಿಕ್ಷಕರುಗಳು ಮಕ್ಕಳ ಚುನಾವಣೆಯನ್ನು ನಿಭಾಯಿಸಿದರು. ಫಲಿತಾಂಶದ ನಂತರ 15 ಜನ ವಿದ್ಯಾರ್ಥಿಗಳನ್ನು ಒಳಗೊಂಡ ಶಾಲಾ ಸಂಸತ್ತು ರಚನೆಯಾಯಿತು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಎಂ.ಪ್ರಕಾಶ್, ಸಹ ಶಿಕ್ಷಕರಾದ ಎಚ್.ಎಮ್.ರಾಜೇಶ್, ವಿಶ್ವನಾಥ್ ಕೆ.ಎಸ್.ಭಾರದ್ವಾಜ್, ನಾಗಪ್ಪ, ಸ್ವಾಮಿ, ಗೋವಿಂದರಾಜು, ಮಹೇಶಪ್ಪ, ಅನಿಲ್ ಕುಮಾರ್, ಮಲ್ಲೇಶ್, ವಿಜಯ್ ಕುಮಾರ್, ಶಿವಪ್ರಕಾಶ್, ಗೋಪಾಲ ಶೆಟ್ಟಿ, ಗೋವಿಂದರಾಜು, ಮೋಹನ್, ಸೌಮ್ಯ, ಮಂಜುಳಾ, ಮನು, ಮದುಕಿರಣ್ ಇತರರು ಹಾಜರಿದ್ದರು.