Wednesday, March 18, 2026
Google search engine

Homeಸ್ಥಳೀಯಮಳೆ-ಗಾಳಿಗೆ ಶಾಲೆ ಮೇಲ್ಚಾವಣಿ ಹಾನಿ : ತಪ್ಪಿದ ಅನಾಹುತ

ಮಳೆ-ಗಾಳಿಗೆ ಶಾಲೆ ಮೇಲ್ಚಾವಣಿ ಹಾನಿ : ತಪ್ಪಿದ ಅನಾಹುತ

ಹುಣಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವರ್ಷದ ಮೊದಲ ಮಳೆ ಸುರಿದಿದೆ. ಸುಮಾರು 1 ಗಂಟೆಗೂ ಹೆಚ್ಚು ಸಮಯ ವರುಣ ಅಬ್ಬರಿಸಿದ್ದು, ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಮಂದಿಗೆ ತಂಪಿನ ಅನುಭವವಾಗಿದೆ.

ಈ ನಡುವೆ ಭಾರೀ ಗಾಳಿ ಮಳೆ ವೇಳೆ ಹುಣಸೂರು ತಾಲೂಕಿನ ದಾಸನಪುರದಲ್ಲಿ ಭಾರಿ ಅನಾಹುತವೊಂದು ತಪ್ಪಿದೆ. ಮಕ್ಕಳು ತರಗತಿಯಲ್ಲಿದ್ದ ಹೊತ್ತಲ್ಲೇ ಗಾಳಿ ಮಳೆಗೆ ಶಾಲೆಯ ಮೇಲ್ಚಾವಣಿ ಹಾರಿ ಹೋಗಿದ್ದು, ಈ ವೇಳೆ ಸಮಯಪ್ರಜ್ಞೆ ಮೆರೆದ ಶಿಕ್ಷಕಿ ಸುಮಾ ಎಲ್ಲ ವಿದ್ಯಾರ್ಥಿಗಳನ್ನು ಡೆಸ್ಕ್ ಕೆಳಗೆ‌ ಕೂರಿಸಿದ್ದಾರೆ. ಹೀಗಾಗಿ ಸಂಭವನೀಯ ಅನಾಹುತ ತಪ್ಪಿದೆ. ಗಾಳಿಗೆ ಮೇಲ್ಛಾವಣಿ ಹಾರಿ ಹೋಗುವ ಬದಲು ಕುಸಿದಿದ್ದರೆ ದೊಡ್ಡ ಅನಾಹುತವೇ ನಡೆಯುವ ಸಾಧ್ಯತೆ ಇತ್ತು ಎನ್ನಲಾಗಿದೆ.

RELATED ARTICLES
- Advertisment -
Google search engine

Most Popular