ಮೈಸೂರು: ನಗರದ ಹೋಲಿ ಕ್ರೆಸೆಂಟ್ ಸಮೂಹ ವಿದ್ಯಾಸಂಸ್ಥೆಯಲ್ಲಿ ಇಂದು ಶನಿವಾರ ಡಿ೩೦ ರಂದು ಭಾಷೆ, ಚಿತ್ರಕಲೆ, ವಿಜ್ಞಾನ, ತಂತ್ರಜ್ಞಾನಗಣಿತ, ಸಮಾಜ ವಿಜ್ಞಾನಕ್ರೀಡೆ ಹೀಗೆ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ. ಈ ವಸ್ತು ಪ್ರದರ್ಶನದಲ್ಲಿಚಂದ್ರಯಾನ-ವಿಕ್ರಮ್ ಲ್ಯಾಂಡರ್-ಪ್ರಜ್ಞಾನ್ ರೋವರ್, ರಾಷ್ಟ್ರಕವಿ ಕುವೆಂಪು ಅವರ ಜನ್ಮಶತಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ ಕವಿ ಶೈಲ, ಕ್ರೀಡಾಮಾದರಿಗಳನ್ನು ಒಳಗೊಂಡಂತೆ ಹಲವಾರು ಮಾದರಿಗಳು ಪ್ರೇಕ್ಷಕರ ಗಮನ ಸೆಳೆದವು. ಮಾದರಿಗಳಿಗೆ ಸಂಬಂಧಪಟ್ಟಂತೆ ಮಕ್ಕಳ ವಿಷಯ ವಿವರಣೆ ಪೋಷಕರ ಗಮನ ಸೆಳೆಯಿತು.
ಈ ಕಾರ್ಯಕ್ರಮಕ್ಕೆ ಸಾರ್ವಜನಿಕ ಶಿಕ್ಷಣಾ ಇಲಾಖೆಯಕ್ರೇತ್ರ ಶಿಕ್ಷಣಾಧಿಕಾರಿಗಳಾದ ಸೋಮಲಿಂಗಯ್ಯನವರುಮುಖ್ಯ ಅತಿಥಿಗಳಾಗಿ ಆಗಮಿಸಿದ್ದಾರು. ಈ ಸಂದರ್ಭದಲ್ಲಿ ಮಾತನಾಡಿದ ಇವರು ತರಗತಿಯ ಹೊರಗು ಸಹಾ ಮಕ್ಕಳನ್ನು ಕೇಂದ್ರಿಕರಿಸುವಲ್ಲಿ ಶಿಕ್ಷಕರ ಪ್ರಯತ್ನ ಉತ್ತಮವಾಗಿದೆ ಎಲ್ಲಾ ಶಾಲೆಗಳಲ್ಲಿಯು ಶಿಕ್ಷಕರು ಇದೆರೀತಿ ಕಲಿಕಾ ಚಟುವಟಿಕೆಗಳನ್ನು ಭೋದನೆಯಲ್ಲಿ ಅಳವಡಿಸಿಕೊಂಡರೆ ವಿದ್ಯಾರ್ಥಿಗಳಲ್ಲಿ ಕಲಿಕೆ ಯಶಸ್ವಯಾಗುತ್ತದೆಎಂದು ತಿಳಿಸಿದರು. ಈ ಕಾರ್ಯಕ್ರಮಕ್ಕೆರಾಮನಗರದ ಕನ್ನಡ ಸಾಹಿತ್ಯ ಪರಿಷತ್ತಿನಅಧ್ಯಕ್ಷಾರಾದ ಪಿ.ದಿನೇಶ್‌ಹಾಗೂ ಗೌಸಿಯಾ ಇಂಜಿನಿಯರಿಂಗ್‌ಕಾಲೇಜಿನ ಪ್ರಾಂಶುಪಾಲ ಡಾ.ಜಾಹಿರ್ ಹಸನ್‌ಅವರು ಸಹ ಆಗಮಿಸಿದ್ದರು.

ಈ ಸಂದರ್ಭದಲ್ಲಿ ಶಾಲೆಯಅಧ್ಯಕ್ಷರಾದ ಡಾ, ಶಾಜಿಯಾ, ಕಾರ್ಯದರ್ಶಿಗಳಾದ ಅಲ್ತಾಫ್‌ಅಹ್ಮದ್, ಪ್ರಾಂಶುಪಾಲರಾದ ಶಿವಮೂರ್ತಿ ಎಸ್, ಮುಖೋಪಾಧ್ಯ್ಯಾಯರಾದ ಲತಾಆನಂದ್, ಆಡಳಿತಾಧಿಕಾರಿಗಳಾದ ಸ್ಟ್ಯಾನ್ಲಿ ಪಾಲ್ , ಪೋಷಕರು ಹಾಗೂ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.