ಮಂಡ್ಯ: ಕಂಠಪೂರ್ತಿ ಕುಡಿದು ಬಂದು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ದ್ವಿತೀಯ ದರ್ಜೆ ಸಹಾಯಕನ ವಿರುದ್ಧ ತಹಶೀಲ್ದಾರ್ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ನಾಗಮಂಗಲ ತಾಲ್ಲೂಕಿನ ಬೆಳ್ಳೂರು ನಾಡ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಪರಶಿವಮೂರ್ತಿ ಮದ್ಯಪಾನ ಮಾಡಿ ಕಚೇರಿಗೆ ಬಂದಿದ್ದ. ಈ ವೇಳೆ ತಹಶೀಲ್ದಾರ್ ನಹೀಂ ಉನ್ನೀಸಾ ನಾಡ ಕಚೇರಿಗೆ ದಿಢೀರ್ ಭೇಟಿ ನೀಡಿದ್ದಾರೆ.
ಕುಡಿದು ಬಂದು ಹೇಗೆ ಸಾರ್ವಜನಿಕರ ಕೆಲಸವನ್ನು ನಿರ್ವಹಿಸುತ್ತೀರಿ? ನಿಮಗೆ ಮನಸ್ಸಾಕ್ಷಿ ಇಲ್ಲವೇ ಎಂದು ಪರಶಿವಮೂರ್ತಿಗೆ ತಹಶೀಲ್ದಾರ್ ಪ್ರಶ್ನಿಸಿದ್ದು, ಕುಡಿದು ಗಬ್ಬು ನಾರುತ್ತಿದ್ದರೂ ಇಲ್ಲವೆಂದು ವಾದಿಸಿದ್ದಾನೆ.
ಪರಿಣಾಮ ಪಕ್ಕದ ಸಾರ್ವಜನಿಕ ಆಸ್ಪತ್ರೆಯಲ್ಲಿದ್ದ ವೈದ್ಯರನ್ನು ಕರೆಸಿ ಪರಶಿವಮೂರ್ತಿಯನ್ನು ತಪಾಸಣೆ ಮಾಡಿದಾಗ ಸತ್ಯ ಬಯಲಿಗೆ ಬಂದಿದೆ. ಈ ಸಂಬಂಧ ಪರಶಿವಮೂರ್ತಿ ವಿರುದ್ಧ ಡಿಸಿಗೆ ತಹಶೀಲ್ದಾರ್ ವರದಿ ಸಲ್ಲಿಸಿದ್ದಾರೆ.
