ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಬೆಳಗಾವಿ ತಹಶೀಲ್ದಾರ್ ಕಛೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿದ್ದ ರುದ್ರಣ್ಣಯಡವಣ್ಣವರ್ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವನ್ನು ತನಿಖೆ ಮಾಡಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ತಾಲೂಕು ದ್ವಿತೀಯ ದರ್ಜೆ ಸಹಾಯಕರ ಸಂಘದ ವತಿಯಿಂದ ತಹಶೀಲ್ದಾರ್‌ರವರಿಗೆ ಮನವಿ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಸ್.ಆರ್.ಯಶವಂತಕುಮಾರ್ ಆತ್ಮಹತ್ಯೆ ಮಾಡಿಕೊಂಡಿರುವ ರುದ್ರಣ್ಣಯಡವಣ್ಣವರ್ ಅವರ ಕುಟುಂಬಕ್ಕೆ ನ್ಯಾಯ ದೊರಕಬೇಕಾದರೆ ಸಮಗ್ರ
ತನಿಖೆಯಾಗಬೇಕು ಎಂದರಲ್ಲದೆ ಈ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು
ಮನವಿ ಮಾಡಿದರು.
ವರ್ಗಾವಣೆ ಒತ್ತಡಕ್ಕೆ ಮನನೊಂದು ನೇಣಿಗೆ ಶರಣಾಗಿರುವುದರಿಂದ ಅವರ ಕುಟುಂಬ ಬೀದಿಪಾಲಾಗಿದ್ದು ಕಂದಾಯ ಇಲಾಖೆಯ ವತಿಯಿಂದ ಕೂಡಲೇ ಸೂಕ್ತ ಪರಿಹಾರ ನೀಡುವುದರ ಜತೆಗೆ ಘಟನೆಯಲ್ಲಿ ಸಾವನ್ನಪ್ಪಿರುವ ರುದ್ರಣ್ಣಯಡವಣ್ಣವರ್ ಅವರ ಸ್ಥಿತಿ ಇತರೆ ದ್ವಿತೀಯ ದರ್ಜೆ ಸಹಾಯಕರಿಗೆ ಬಾರದಂತೆ ಸರ್ಕಾರ ಕಾನೂನು ರೂಪಿಸಬೇಕು ಎಂದರು.
ಜನಸಂಖ್ಯೆಗೆ ಪೂರಕವಾಗಿ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳನ್ನು ಮಂಜೂರು ಮಾಡದೆ ಇರುವುದರಿಂದ ನಾವು ಕೆಲಸ ಮಾಡುವಾಗ ಒತ್ತಡ ಹೆಚ್ಚಾಗಿ ವೈಯುಕ್ತಿಕ ಕೆಲಸಗಳಿಗೆ ರಜೆಯನ್ನು ನೀಡದಿರುವುದು ಇಂತಹ
ಘಟನೆಗಳಿಗೆ ಕಾರಣವಾಗಿದ್ದು ಇದರೊಂದಿಗೆ ನೌಕರರ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ಜವಬ್ದಾರಿ ವಹಿಸುತ್ತಿದ್ದು ಇದು ತಪ್ಪಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂಧರ್ಭದಲ್ಲಿ ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ ಅವರ ಮೂಲಕ ಸಂಘದ ವತಿಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸಂಘದ ಉಪಾಧ್ಯಕ್ಷ ವರುಣ್, ಪದಾಧಿಕಾರಿಗಳಾದ ರಂಜಿನಿ, ರಮ್ಯ, ಅಶ್ವಿನಿ, ಲಕ್ಷಿö್ಮ, ಪ್ರಶಾಂತ್, ಚಂದನ್‌ಕುಮಾರ್ ಮತ್ತಿತರರು ಇದ್ದರು.