ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಕುಪ್ಪೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಎಸ್.ಡಿ.ಎಂ.ಸಿ. ಪುಷ್ಠಿ ಕಾರ್ಯಕ್ರಮ ಪರಿಶೀಲನೆಗಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಸರ್ಕಾರಿ ಶಾಲೆಗಳನ್ನು ಎಸ್.ಡಿ.ಎಂ.ಸಿ.ಮೂಲಕ ಅಭಿವೃದ್ದಿ ಪಡಿಸಿರುವ ಮತ್ತು ಪೋಷಕರನ್ನು ಶಾಲೆಯ ಶೈಕ್ಷಣಿಕ ಅಭಿವೃದ್ದಿಗೆ ಬಳಸಿ ಕೊಂಡಿರುವ ಕುರಿತು ಅಗತ್ಯ ಮಾಹಿತಿಯ ದಾಖಲೆಗಳನ್ನು ಅನ್ಲೈನ್ ಮೂಲಕ ನೊಂದಣಿ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಶಾಲೆಯವರು ಸರ್ಕಾರಕ್ಕೆ ಸಲ್ಲಿರುವ ದಾಖಲೆಗಳನ್ನ ಮೈಸೂರು ಡಯಟ್ ಹಿರಿಯ ಉಪನ್ಯಾಸಕ ಶಿವಶಂಕರ್ ನೇತೃತ್ವದಲ್ಲಿ ಭೇಟಿನೀಡಿ ಪರಿಶೀಲನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಯಟ್ ಮೈಸೂರು ಹಿರಿಯ ಉಪನ್ಯಾಸಕ ಶಿವಶಂಕರ್ ಈ ಶಾಲೆ ಅವರು ಶಾಲೆಯ ಅಭಿವೃದ್ಧಿಯ ಕುರಿತು ಸರ್ಕಾರಕ್ಕೆ ಸಲ್ಲಿಸಿರುವ ದಾಖಲೆಗಳನ್ನು ಪರೀಶೀಲನೆ ನಡೆಸಿ ಸರ್ಕಾರಕ್ಕೆ ವರದಿ ನೀಡಲಾಗುವುದು ಸರ್ಕಾರ ಇದರ ಅಧಾರದ ಮೇಲೆ ಶಾಲೆಯ ಶೈಕ್ಷಣಿಕ,ಭೌತಿಕ ಅಭಿವೃದ್ದಿಗೆ ಅನುಧಾನ ಮತ್ತು 1 ಲಕ್ಷ ಬಹುಮಾನ ನೀಡಲು ಆಯ್ಕೆ ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪಿ.ಎಂ.ಪೋಷಣ್ ಅಭಿಯಾನದ ಸಹಾಯಕ ನಿರ್ದೇಶಕ ಪಿ.ಸ್ವಾಮಿಗೌಡ, ಸಿ.ಆರ್.ಪಿ. ಚನ್ನಂಗೆರೆ ಪ್ರಭು ಮುಖ್ಯ ಶಿಕ್ಷಕ ಶ್ರೀರಾಮಪುರ ಶ್ರೀನಿಧಿ, ಎಸ್.ಡಿ ಎಂ.ಸಿ. ಅಧ್ಯಕ್ಷೆ ತುಳಸಿ ಸೇರಿದಂತೆ ಮತ್ತಿತರರು ಹಾಜರಿದ್ದರು.