Thursday, April 3, 2025
Google search engine

Homeರಾಜ್ಯಸುದ್ದಿಜಾಲವಿವಾದಿತ ಬ್ರಹ್ಮರಕೊಟ್ಲು ಟೋಲ್‌ಗೇಟ್‌ ತೆರವುಗೊಳಿಸಲು ಆಗ್ರಹಿಸಿ ಎಸ್‌ಡಿಪಿಐ ಧರಣಿ ಸತ್ಯಾಗ್ರಹ

ವಿವಾದಿತ ಬ್ರಹ್ಮರಕೊಟ್ಲು ಟೋಲ್‌ಗೇಟ್‌ ತೆರವುಗೊಳಿಸಲು ಆಗ್ರಹಿಸಿ ಎಸ್‌ಡಿಪಿಐ ಧರಣಿ ಸತ್ಯಾಗ್ರಹ

ಮಂಗಳೂರು (ದಕ್ಷಿಣ ಕನ್ನಡ): ವಿವಾದಿತ ಮತ್ತು ಅಕ್ರಮವಾಗಿರುವ ಬ್ರಹ್ಮರಕೊಟ್ಲು ಟೋಲ್‌ಗೇಟ್‌ ತೆರವುಗೊಳಿಸಲು ಆಗ್ರಹಿಸಿ ಇಂದು ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯು ಬ್ರಹ್ಮರಕೊಟ್ಲು ಟೋಲ್‌ಗೇಟ್‌ ಬಳಿ ಧರಣಿ ಸತ್ಯಾಗ್ರಹದ ಮೂಲಕ ಟೋಲ್ ಗೇಟ್ ವಿರೋಧಿ ಹೋರಾಟ ನಡೆಸಿತು.

ನ್ಯಾಯವಾದಿ ಹಾಗೂ ಕ್ರೈಸ್ತ ಧರ್ಮಗುರು ಜೆರಾಲ್ಡ್ ಸಿಕ್ವೇರಾ ರವರು ಬ್ಯಾಂಡ್ ಬಾರಿಸುವ ಮೂಲಕ ಅಧಿಕೃತ ಚಾಲನೆ ನೀಡಿದರು.

ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದ ಸಾಮಾಜಿಕ ಹೋರಾಟಗಾರ, ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಮುಖ್ಯ ಭಾಷಣಗೈದರು.

ಈ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ನಾಯಕರಾದ ಆಲ್ಫೋನ್ಸ್ ಫ್ರಾಂಕೋ, ನಿವೃತ್ತ ಪ್ರಧಾನ ಅಂಚೆ ಪಾಲಕರಾದ ಬಿ. ಗಂಗಾಧರ್, ಎಸ್. ಡಿ. ಪಿ. ಐ ಮಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಅಲೆಕ್ಕಾಡಿ, ಉಪಾಧ್ಯಕ್ಷರು ಇನಾಸ್ ರೋಡ್ರಿಗಸ್, ಮೂನಿಶ್ ಅಲಿ ಬಂಟ್ವಾಳ ಹಾಗೂ ಜಿಲ್ಲಾ ಸಮಿತಿ ನಾಯಕರು ವಿಧಾನ ಸಭಾ ನಾಯಕರುಗಳು ಕಾರ್ಯಕರ್ತರು, ಹಲವು ಸಾಮಾಜಿಕ ಹೋರಾಟಗಾರರು, ವಿದ್ಯಾರ್ಥಿಗಳು, ನಿತ್ಯ ಸವಾರ ವಾಹನ ಚಾಲಕ ಮಾಲಕರು ಸಹಿತ ಹಲವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular