Thursday, April 17, 2025
Google search engine

Homeರಾಜಕೀಯಶೀಘ್ರವೇ ಸೀಟ್ ಮ್ಯಾಟ್ರಿಕ್ಸ್ ಪ್ರಕಟ: ಸಚಿವ ಎಂ.ಸಿ.ಸುಧಾಕರ್

ಶೀಘ್ರವೇ ಸೀಟ್ ಮ್ಯಾಟ್ರಿಕ್ಸ್ ಪ್ರಕಟ: ಸಚಿವ ಎಂ.ಸಿ.ಸುಧಾಕರ್

ಚಿಕ್ಕಬಳ್ಳಾಪುರ: ‘ಸುಪ್ರಿಂಕೋರ್ಟ್ ಆದೇಶದನ್ವಯ ಶೀಘ್ರವೇ ಸೀಟ್ ಮ್ಯಾಟ್ರಿಕ್ಸ್ ಪ್ರಕಟಿಸುತ್ತೇವೆ ಎಂದು ಉನ್ನತ ಶಿಕ್ಷಣ ಖಾತೆ ಸಚಿವ ಡಾ. ಎಂ.ಸಿ.ಸುಧಾಕರ್ ಹೇಳಿದರು.

ನೀಟ್ ಪರೀಕ್ಷೆ ಹಾಗೂ ಫಲಿತಾಂಶ ಗೊಂದಲ ಹಿನ್ನಲೆ ರಾಜ್ಯದ ಸಿಇಟಿ ಮ್ಯಾಟ್ರಿಕ್ಸ್ ಮೇಲೆ ಕರಾಳ ಛಾಯೆ ಬೀರಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ‘ ಈಗಾಗಲೇ ಕಾಲೇಜು ಆಯ್ಕೆಗೆ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ. 2024-25ರ ಶೈಕ್ಷಣಿಕ ಸಾಲಿಗೆ ಅನುಕೂಲವಾಗುವಂತೆ ಸೂಕ್ತ ಕ್ರಮ ಕೈಗೊಳ್ಳುತ್ತೆವೆ ಎಂದಿದ್ದಾರೆ.

ನೀಟ್- ಯುಜಿ ಗೆ ಸಂಬಂಧಿಸಿದಂತೆ ಯಾವುದೇ ಮರು ಪರೀಕ್ಷೆ ಇರುವುದಿಲ್ಲ

ವಿವಾದಕ್ಕೆ ಸಿಲುಕಿರುವ ನೀಟ್ ಪರೀಕ್ಷೆಯ ಫಲಿತಾಂಶ ಶನಿವಾರ(ಜು.21) ಪ್ರಕಟಿಸಲಾಗಿತ್ತು. ಇನ್ನು 2024ರ ನೀಟ್- ಯುಜಿ (NEET-UG) ಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಮರು ಪರೀಕ್ಷೆ ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ(ಜು.23) ಹೇಳಿತ್ತು. ಎರಡು ಸ್ಥಳೀಯ ಪ್ರಶ್ನೆ ಪತ್ರಿಕೆಗಳ ಸೋರಿಕೆಗಳ ನಂತರ ಪರೀಕ್ಷೆಯ “ವ್ಯವಸ್ಥಿತ ಉಲ್ಲಂಘನೆ” ಅನ್ನು ಸೂಚಿಸುವ ಯಾವುದೇ ಡೇಟಾ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠವು ಮರು-ಪರೀಕ್ಷೆಯನ್ನು ನಡೆಸುವ ಆದೇಶವು 23.33 ಲಕ್ಷ ಮಹತ್ವಾಕಾಂಕ್ಷಿ ವೈದ್ಯಕೀಯ ವೃತ್ತಿಪರರ ಮೇಲೆ ದೊಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ಹೇಳಿದ್ದರು.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಎನ್​ಟಿಎ ನಗರವಾರು ಮತ್ತು ಪರೀಕ್ಷಾ ಕೇಂದ್ರವಾರು ಫಲಿತಾಂಶಗಳನ್ನು ಪ್ರಕಟಿಸಿದ್ದು, ದೇಶಾದ್ಯಂತ ವಿವಿಧ ನಗರಗಳಲ್ಲಿನ 4,750 ಸೆಂಟರ್​ಗಳಲ್ಲಿ 32 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಆದರೆ, ಈ ಬಾರಿ ಪೇಪರ್ ಲೀಕ್ ಸೇರಿದಂತೆ ಅಕ್ರಮ ನಡೆಸಲಾಗಿತ್ತು ಎಂದು ಆರೋಪಿಸಲಾದ ಪರೀಕ್ಷಾ ಕೇಂದ್ರಗಳಲ್ಲಿ ರಿಸಲ್ಟ್ ಕಳಪೆಯಾಗಿ ಬಂದಿದೆ. ಕೆಲ ಸೆಂಟರ್​ಗಳಲ್ಲಿ ಬಹಳ ಉತ್ತಮ ಎನಿಸುವ ರಿಸಲ್ಟ್ ಬಂದಿದೆ.

RELATED ARTICLES
- Advertisment -
Google search engine

Most Popular