ಬಳ್ಳಾರಿ: ಜಗದ್ಗುರು ಚಿನ್ಮೂಲಾದ್ರಿ ಶಿಲಾಪುರು ಸೂರ್ಯ ಸಿಹಾಂಸನ ಭಗೀರಥ ಪೀಠ ಮಹಾಸಂಸ್ಥಾನದ, ಭಗೀರಥ ವಿದ್ಯಾಪೀಠದ ಹೊಸದುರ್ಗದಲ್ಲಿ ರಾಜ್ಯ ಮಟ್ಟದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ವಿಶೇಷ ಸಾಧಕರಿಗೆ ಸನ್ಮಾನ ಸಮಾರಂಭ ಹಮ್ಮಿಕೊಂಡಿದ್ದು ಜಿಲ್ಲೆಯ ಉಪ್ಪಾರ ಸಮಾಜದ ಹೆಚ್ಚು ಜನರ ಭಾಗಿಯಾಗುವ ಮೂಲಕ ಸಮಾರಂಭ ಯಶಸ್ವಿಗೊಳಿಸುವಂತೆ ಜಿಲ್ಲಾಧ್ಯಕ್ಷ್ಯ ಹನುಮೇಶ್ ಉಪ್ಪಾರ ಕರೆ ನೀಡಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೀಷ್ಠಿ ನಡೆಸಿ ಮಾತನಾಡಿದ ಹನುಮೇಶ್, ಪ್ರತಿ ವರ್ಷದಂತೆ ಈ ವರ್ಷವು ಸೆಪ್ಟಂಬರ್ 3ರಂದು ಶ್ರೀಭಗೀರಥ ವಿದ್ಯಾಪೀಠ, ಬ್ರಹ್ಮವಿದ್ಯಾನಗರ ಹೊಸದುರ್ಗದಲ್ಲಿ ಸಮಾಜದ ಮಕ್ಕಳನ್ನ ಪ್ರೋತ್ಸಾಹಿಸಲು ಪಿಯುಸಿ ಮತ್ತು ಎಸ್ ಎಸ್ ಎಲ್ ಸಿಯಲ್ಲಿ ಅತೀ ಹೆಚ್ಚು ಅಂಕಪಡೆದ ಭಗೀರಥ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಮತ್ತು ನೂತನ ಸಚಿವರಿಗೆ ಶಾಸಕರಿಗೆ, ನಿವೃತ್ತ ಅಧಿಕಾರಿಗಳಿಗೆ, ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಶ್ರೀ ಡಾ.ಪುರುಷೋತ್ತಮ ನಂದಾಪುರಿ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ. ರಾಜ್ಯಾಧ್ಯಕ್ಷ್ಯರಾದ ವೆಂಕೋಬಣ್ಣ ಅವರ ಅಧ್ಯಕ್ಷತೆಯಲ್ಲಿ, ಶಾಸಕರಾದ ಪುಟ್ಟರಂಗ ಶೆಟ್ಟಿ ಅಧ್ಯಕ್ಷತೆಯಲ್ಲಿ. ಅನೇಕ ಶಾಸಕರು, ಸಚಿವರು ಗಣ್ಯಾತಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು. ಬಳ್ಳಾರಿ ಜಿಲ್ಲೆಯ ನಮ್ಮ ಸಮಾಜದ ಮಕ್ಕಳು ಸದುಪಯೋಗ ಪಡಿಸಿಕೊಂಡು ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ್ಯ ಸಂಗನಕಲ್ ಕೃಷ್ಣಪ್ಪ, ನಗರಾಧ್ಯಕ್ಷ್ಯ ಶ್ರೀರಾಮುಲು, ರಾಜ್ಯ ಉಪಾಧ್ಯಕ್ಷ್ಯ, ಸಿದ್ದೇಶ್ ಉಳೂರು, ನೀಲಕಠ, ಮಲ್ಲಪ್ಪ, ನಾಗರಾಜ್, ತಿಮ್ಮಪ್ಪ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.