ಮೈಸೂರು: ನಗರದ ಎಂ. ಎಂ. ಕೆ ಮತ್ತು ಎಸ್. ಡಿ. ಎಂ ಮಹಿಳಾ ಕಾಲೇಜಿನ ವಾಣಿಜ್ಯ ವಿಭಾಗದ ದ್ವಿತೀಯ ಬಿ. ಕಾಂ ವಿದ್ಯಾರ್ಥಿನಿಯರಾದ ನಿಸರ್ಗ ಮಹೇಶ್ ಮತ್ತು ಕಲ್ಯಾಣಿ ರವರು ಇತ್ತೀಚೆಗೆ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಅಂತರ ಕಾಲೇಜು ಉತ್ಸವ “ಶ್ರೇಷ್ಠ ೨೦೨೪” ರಲ್ಲಿನ ಮಾನವ ಸಂಪನ್ಮೂಲ ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ. ಇವರನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಸಾಯಿನಾಥ್ ಮಲ್ಲಿಗೆಮಾಡು, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀ ಎಚ್. ವಿ. ಪ್ರಶಾಂತ್ ಜೈನ್, ಸಹಾಯಕ ಪ್ರಾಧ್ಯಾಪಕರಾದ ಎಸ್. ಮಹದೇವಸ್ವಾಮಿ,ವಿಭಾಗದ ಪ್ರಾಧ್ಯಾಪಕರು ಮತ್ತು ಕಾಲೇಜಿನ ಆಡಳಿತ ಮಂಡಳಿಯವರು ಅಭಿನಂದಿಸಿದರು.