ಚಾಮರಾಜನಗರ: ತಾಲೂಕು ಆಲೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಲಾವಿಭಾಗದ ಹರ್ಷಿತ ಎಂಕೆ 571 ಅಂಕಗಳನ್ನು ಪಡೆದು ಜಿಲ್ಲೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ಕಲಾವಿಭಾಗದ ಚೈತ್ರ 559 ,ವಾಣಿಜ್ಯ ವಿಭಾಗದ ಪ್ರಿಯಾಂಕ 529 ಅಂಕಗಳನ್ನು ಪಡೆದಿರುತ್ತಾರೆ. ಕಲಾವಿಭಾಗದಲ್ಲಿ 87.5 ವಾಣಿಜ್ಯ ವಿಭಾಗದಲ್ಲಿ 100 ಫಲಿತಾಂಶ ನೀಡಿರುವ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಉಪನ್ಯಾಸಕರು ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ.