Thursday, April 3, 2025
Google search engine

Homeರಾಜ್ಯಲೋಕಸಭೆಯಲ್ಲಿ ಭದ್ರತಾ ಲೋಪ: ಮನೋರಂಜನ್ ನಿವಾಸಕ್ಕೆ 2 ಬಾರಿ ಬಂದು ಹೋಗಿದ್ದ ಸಾಗರ್ ಶರ್ಮಾ

ಲೋಕಸಭೆಯಲ್ಲಿ ಭದ್ರತಾ ಲೋಪ: ಮನೋರಂಜನ್ ನಿವಾಸಕ್ಕೆ 2 ಬಾರಿ ಬಂದು ಹೋಗಿದ್ದ ಸಾಗರ್ ಶರ್ಮಾ

ಮೈಸೂರು: ಲೋಕಸಭೆ ಕಲಾಪದ ವೇಳೆ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹಾಗೂ ಮೈಸೂರು ಪೊಲೀಸರಿಂದ ತನಿಖೆಗಳು ನಡೆಯುತ್ತಿದೆ.

ಆರೋಪಿ ಸಾಗರ್ ಶರ್ಮಾ ಮೈಸೂರಿನಲ್ಲಿರುವ ಮನೋರಂಜನ್ ನಿವಾಸಕ್ಕೆ 2 ಬಾರಿ ಬಂದುಹೋಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಸಾಗರ್ ಆತ ಆಟೋ ಚಾಲಕನಾಗಿದ್ದರೂ ಮನೋರಂಜನ್ ತನ್ನ ತಂದೆ, ತಾಯಿಗೂ ಸುಳ್ಳು ಹೇಳಿದ್ದ. ಕಾಲೇಜಿನ ಸಹಪಾಠಿ ಎಂದು ಪರಿಚಯಿಸಿದ್ದ. ಮೈಸೂರಿನ ವಿಜಯನಗರದಲ್ಲಿರುವ ಡಿ.ಮನೋರಂಜನ್ ಮನೆಗೆ ಸಾಗರ್​ ಶರ್ಮಾ ಎರಡು ಬಾರಿ ಬಂದಿದ್ದು, ಮನೆಯಲ್ಲಿ ಊಟ ಮಾಡಿ ಹೋಗಿದ್ದ ಎಂಬ ಮಾಹಿತಿ ಪೊಲೀಸರಿಗೆ ದೊರೆತಿದೆ.

ಸಾಗರ್ ಶರ್ಮ ಮೈಸೂರಿನಲ್ಲಿ ಎಲ್ಲೆಲ್ಲಿ ಓಡಾಡಿದ್ದ, ಬೇರೆ ಯಾರನ್ನೆಲ್ಲ ಸಂಪರ್ಕ ಮಾಡಿದ್ದ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಮೈಸೂರಿಗೆ ಬಂದು ಹೋಗಿದ್ದನ್ನು ಮನೋರಂಜನ್ ಕುಟುಂಬಸ್ಥರು ಕೂಡ ಖಚಿತ ಪಡಿಸಿದ್ದಾರೆ.

ಮೈಸೂರಿನಲ್ಲಿ ಮುಖ್ಯಮಂತ್ರಿಗಳ ನಿವಾಸ ಕೂಡ ಇರುವುದರಿಂದ ಮತ್ತಷ್ಟು ಆತಂಕ‌‌ ವ್ಯಕ್ತವಾಗಿದೆ. ಸಾಗರ್ ಶರ್ಮಾ ಮೈಸೂರಿಗೆ ಎರಡು ಬಾರಿ ಬಂದಿದ್ದರ ಉದ್ದೇಶ ಏನು ಎನ್ನುವುದರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ಲೋಕಸಭೆ ಭದ್ರತಾ ಉಲ್ಲಂಘನೆ ವಿಚಾರವಾಗಿ ಒಬ್ಬ ಆರೋಪಿಯ ಮನೆ ಇರುವ ಹಾಗೂ ಮತ್ತೊಬ್ಬ ಆರೋಪಿ ಓಡಾಡಿದ್ದ ಮೈಸೂರಿನಲ್ಲಿ ಬಿಗಿ ಭದ್ರತೆ ಮುಂದುವರಿಸಲಾಗಿದೆ. ಮೈಸೂರಿನ ವಿಜಯನಗರ ಎರಡನೇ ಹಂತದಲ್ಲಿರೋ ಆರೋಪಿ ಮನೋರಂಜನ್ ನಿವಾಸಕ್ಕೆ ಕೂಡ ಪೊಲೀಸ್ ಭದ್ರತೆ ಮುಂದುವರಿಸಲಾಗಿದೆ.

RELATED ARTICLES
- Advertisment -
Google search engine

Most Popular