ತಾಂಡವಪುರ: ಮೈಸೂರು ಜಿಲ್ಲೆ ಕಡಕೋಳ ಹಾಲು ಉತ್ಪಾದಕರ ಸಹಕಾರ ಸಂಘದ ಐದು ವರ್ಷಗಳ ಅವಧಿಗೆ ನಡೆದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಶ್ರೀಕಂಠ ತೊಂಡೆಗೌಡ ಸೇರಿದಂತೆ 12 ಮಂದಿ ಸದಸ್ಯರು ಆಯ್ಕೆಯಾಗಿದ್ದಾರೆ.
ಇಂದು ಸಂಘದ ಸದಸ್ಯರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಶ್ರೀಕಂಠ ತೊಂಡೆಗೌಡ, ಎನ್ ಚಂದ್ರ, ಜಯಪ್ಪ, ಜಯಸ್ವಾಮಿ, ಕೆ ಚಂದ್ರು, ಶಿವಬೀರ ಮಹಾದೇವ, ಚಂದ್ರಮ್ಮ, ಚಿಕ್ಕಬಿರಮ್ಮ, ಕಾರ್ತಿಕ್ ಕುಮಾರ್, ಕೆ ಸಿ ರಂಗಪ್ಪ ಅವರು ಆಯ್ಕೆಯಾದರೆ. ಎಂ ಬೀರೇಶ ಹಾಗೂ ಪುಟ್ಟಸ್ವಾಮಿ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ವಾಸಿಂ ಪಾಷಾ ಅವರು ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಮಹದೇವ್, ಮುಖಂಡರಾದ ಪಟೇಲ್ ಜವರೇಗೌಡ, ಬೀರೇಗೌಡನ ಹುಂಡಿ ಅಪ್ಪಾಜಿಗೌಡ, ಕೊಂಗರ ನಂಜುಂಡಿ, ಜವರೇಗೌಡ, ಪುಟ್ಟೇಗೌಡ, ಕರಿಗೌಡ, ಕಡಕೋಳದ ಕೆಆರ್ ಮಹದೇವ್, ಟಿ ಎಮ್ ಮಹದೇವ, ಮಾದೇಶ, ಕುಮಾರಸ್ವಾಮಿ, ಸ್ವಾಮಿನಾಯಕ, ರಾಮು, ನರಸಿಂಹ ಗೌಡ, ರಫೀಕ್ ಪಾಷ ಇನ್ನಿತರರು ಹಾಜರಿದ್ದರು.