ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಹೊಸಕೋಟೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಎಚ್.ಎಸ್.ಪಾಂಡು ರಂಗ ಮತ್ತು ಉಪಾಧ್ಯಕ್ಷರಾಗಿ ಸಿದ್ದಲಿಂಗಸ್ವಾಮಿ ಆಯ್ಕೆಯಾಗಿದ್ದಾರೆ.
ಶನಿವಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಾಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಚ್.ಎಸ್.ಪಾಂಡುರಂಗ 9 ಮತಗಳನ್ನು ಪಡೆದು ಗೆಲುವು ಸಾಧಿಸಿದರೇ ಇನ್ನು ಕಾಂಗ್ರೇಸ್ ಬೆಂಬಲಿತರಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೃಷ್ಣಶೆಟ್ಟಿ 3 ಮತಗಳನ್ನು ಪಡೆದು ಪರಾಜಿತರಾದರು
ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತರಾಗಿ ಸ್ಪರ್ಧಿಸಿದ್ದ ಸಿದ್ದಲಿಂಗಸ್ವಾಮಿ 8 ಮತಗಳನ್ನು ಪಡೆದು ಗೆಲುವು ಸಾಧಿಸಿದರೇ ಕಾಂಗ್ರೇಸ್ ಬೆಂಬಲಿತರಾಗಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಹದೇವ ಅವರು 4 ಮತಗಳನ್ನು ಪಡೆದು ಸೋಲು ಕಂಡರು
ಚುನಾವಣಾಧಿಕಾರಿಯಾಗಿ ಕೆ.ಆರ್.ನಗರ ಸಹಕಾರ ಇಲಾಖೆಯ ಸಿಡಿಓ ರವಿ ಕಾರ್ಯನಿರ್ವಹಿಸಿದರು
ಚುನಾವಣಾ ಸಭೆಯಲ್ಲಿ ಸಂಘದ ನಿರ್ದೇಶಕರಾದ ಮಹದೇವ, ಎಚ್.ಕೆ.ಶಿವಕುಮಾರ,ಕೃಷ್ಣೇಗೌಡ,ರಾಜು ಶಿವಣ್ಣನಾಯಕ,ರಾಣಿ ಶಿವಪ್ಪ, ಮಹೇಶ, ಕೃಷ್ಣಶೆಟ್ಟಿ,ಎಚ್.ಎಸ್.ಮಹದೇವ, ಮಂಜುಳಾ ಸಂಘದ ಕಾರ್ಯದರ್ಶಿ ಜಲೇಂದ್ರ ಇದ್ದರು
ನಂತರ ನೂತನ ಅಧ್ಯಕ್ಷರನ್ನು ಕೆ.ಆರ್.ನಗರ ಟಿಎಪಿಸಿಎಂಎಸ್ ನಿರ್ದೇಶಕ ಆಶೋಕ್ ನಾಮದಾರಿ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬೆಣಗನಹಳ್ಳಿ ಪ್ರಶನ್ನ, ಡೈರಿ ಮಾಜಿ ಅಧ್ಯಕ್ಷರಾದ ಈಶ್ವರಪ್ಪ,ಪುಟ್ಟರಾಜು,ಬಸವರಾಜು, ಮಾಜಿ ಉಪಾಧ್ಯಕ್ಷ ರಾಮಕೃಷ್ಣ, ಮಾಜಿ ಉಪಾಧ್ಯಕ್ಷ ಪರಮೇಶ,ಮಾಜಿ ಗ್ರಾ.ಪಂ.ಸದಸ್ಯರಾದ ಸಿ.ಎಂ.ಶಿವಕುಮಾರ್, ಜಲೇಂದ್ರ, ಮುಖಂಡರಾದ ಎಚ್.ಪಿ ಪಾಪಣ್ಣ, ಸೋಮೇಗೌಡ,ರಾಜಪ್ಪ,ಜಯಪ್ಪಶೆಟ್ಟಿ,ಅಪ್ಪಾಜಿಗೌಡ, ಬಿ. ಸಂಜಯ್,ನಾಗರಾಜು,ಸೋಮಶೇಖರ್ ಸೇರಿದಂತೆ ಮತ್ತಿತರರು ಹಾಜರಿದ್ದರು