Tuesday, August 12, 2025
Google search engine

Homeಅಪರಾಧಕಾನೂನುಬಂಡೀಪುರದಲ್ಲಿ ‘ಕಾಡಾನೆ’ ಜೊತೆ `ಸೆಲ್ಫಿ: ಅರಣ್ಯ ಇಲಾಖೆಯಿಂದ ₹25,000 ದಂಡ

ಬಂಡೀಪುರದಲ್ಲಿ ‘ಕಾಡಾನೆ’ ಜೊತೆ `ಸೆಲ್ಫಿ: ಅರಣ್ಯ ಇಲಾಖೆಯಿಂದ ₹25,000 ದಂಡ

ಬಂಡಿಪುರ : ಬಂಡೀಪುರದಲ್ಲಿ ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ಹೋದ ಪ್ರವಾಸಿಗನನ್ನು ಕಾಡಾನೆಯೊಂದು ಅಟ್ಟಾಡಿಸಿ ತುಳಿದ ಘಟನೆಗೆ ಸಂಬಂಧಿಸಿದಂತೆ ಇದೀಗ ‘ಸೆಲ್ಪಿ’ ಕ್ಲಿಕ್ಕಿಸಿದ ಪ್ರವಾಸಿಗನಿಗೆ ಅರಣ್ಯ ಇಲಾಖೆ 25,000 ರೂ ದಂಡ ವಿಧಿಸಿದೆ.

ನಂಜನಗೂಡಿನ ಬಸವರಾಜು ಎಂಬುವವರು ಕಾಡಾನೆ ಜೊತೆ ಸೆಲ್ಪಿ ತೆಗೆದುಕೊಳ್ಳಲು ಹೋಗಿ ಅಪಾಯಕ್ಕೆ ಸಿಲುಕಿದ್ದರು. ವನ್ಯಜೀವಿಗಳಿಗೆ ತೊಂದರೆ ಕೊಡದಂತೆ, ಇನ್ನುಮುಂದೆ ಇಂತಹ ಕೆಲಸ ಮಾಡದಂತೆ ಮುಚ್ಚಳಿಕೆ ಬರೆಸಿಕೊಂಡು 25,000 ರೂ ದಂಡ ವಿಧಿಸಿದೆ.

ಕರ್ನಾಟಕದ ಬಂಡೀಪುರ ಹುಲಿ ಅಭಯಾರಣ್ಯದಲ್ಲಿ ಪ್ರವಾಸಿಗನೊಬ್ಬ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಕಾಡಾನೆ ಮುಂದೆ ಹೋಗಿದ್ದಾನೆ. ಈ ವೇಳೆ ಕಾಡಾನೆ ದಾಳಿ ನಡೆಸಿದ್ದು, ಆನೆ ಆತನನ್ನು ನೆಲಕ್ಕೆ ತಳ್ಳಿದೆ. ಆನೆಯ ಕಾಲಿನ ಕೆಳಗೆ ಆತ ಸಿಲುಕಿಕೊಂಡಿದ್ದಾನೆ. ಆದರೆ ಆನೆ ನಿಧಾನವಾಗಿ ಆತನ ಮೇಲೆ ಕಾಲು ಇರಿಸಿದ್ದು, ಅದೃಷ್ಟವಶಾತ್ ಪ್ರವಾಸಿಗ ಪ್ರಾಣಾಪಾಯದಿಂದ ಬದುಕುಳಿದಿದ್ದಾನೆ.

ವಾಹನಗಳು ಮತ್ತು ಜನರಿಂದ ತುಂಬಿದ್ದ ರಸ್ತೆಯಲ್ಲಿ ನಿಂತಿದ್ದ ಆನೆ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪ್ರವಾಸಿಗರ ಮೇಲೆ ಇದ್ದಕ್ಕಿದ್ದಂತೆ ಆನೆ ದಾಳಿ ನಡೆಸಿದೆ. ಕಾಡು ಆನೆಯನ್ನು ಕಂಡ ಆ ವ್ಯಕ್ತಿ ಪ್ರಾಣ ಉಳಿಸಿಕೊಳ್ಳಲು ಓಡುತ್ತಿರುವುದು ಕಂಡುಬರುತ್ತದೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ.

RELATED ARTICLES
- Advertisment -
Google search engine

Most Popular