ಮೈಸೂರು : ನಗರದಲ್ಲಿ ನಕಲಿ ಫೆವಿಕ್ವಿಕ್ ಮಾರಾಟ ಮಾಡುತ್ತಿದ್ದ ಏಜೆನ್ಸಿ ಮೇಲೆ ದೇವರಾಜ ಠಾಣೆ ಪೊಲೀಸರು ದಾಳಿ ನಡೆಸಿ ನಕಲಿ ಫೆವಿಕ್ವಿಕ್ ಪ್ಯಾಕ್‌ಗಳನ್ನು ವಶಕ್ಕೆ ಪಡೆದು ಒಬ್ಬನನ್ನು ಬಂಧಿಸಿದ್ದಾರೆ.
ಸಂತೆಪೇಟೆಯಲ್ಲಿರುವ ಮಹೇಶ್ ಎಜೆನ್ಸಿ ಮಾರ್ಕೆಟಿಂಗ್ ಅಂಗಡಿಯಲ್ಲಿ ಫೆವಿಕ್ವಿಕ್ ಕಂಪನಿ ಯ ನಕಲಿ ಪ್ಯಾಕ್‌ಗಳನ್ನ ಮಾರಾಟ ಮಾಡುತ್ತಿರುವ ಬಗ್ಗೆ ಕಂಪನಿಯ ಅಧಿಕೃತ ಪ್ರತಿನಿಧಿ ಯಾದ ಪೂ ಬಾಲನ್ ಹಾಗೂ ಶೇಕ್ ಖಾಸಿಂ ಅವರಿಗೆ ಮಾಹಿತಿ ದೊರೆತಿದ್ದು ಎರಡು ದಿನಗಳ ಹಿಂದೆ ಅಂಗಡಿಯಿಂದ ಫೆವಿಕ್ವಿಕ್ ಖರೀದಿಸಿ ಪರಿಶೀಲನೆ ಮಾಡಿದಾಗ ಅಸಲು ಪ್ಯಾಕಿಂಗ್ ಅನ್ನು ಹೋಲಿಕೆ ಆಗುವಂತೆ ಡ್ಯೂಪ್ಲಿಕೇಟ್ ತಯಾರಿಸಿ ಮಾರಾಟ ಮಾಡುತ್ತಿರುವುದು ಖಚಿತವಾಗಿತ್ತು. ಈ ಹಿನ್ನಲೆ ಅಧಿಕಾರಿಗಳು ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕಾರ್ಯಾಚರಣೆಯಲ್ಲಿ ದೇವರಾಜ ಠಾಣೆಯ ಇನ್ಸ್‌ಪೆಕ್ಟರ್ ಟಿ.ಬಿ. ಶಿವಕುಮಾರ್, ಸಬ್ ಇನ್ಸ್ ಪೆಕ್ಟರ್ ಎಂ. ಜೈಕೀರ್ತಿ, ಕಂಪನಿಯ ಪ್ರತಿನಿಧಿ ಪೂಬಾಲನ್, ಶೇಕ್ ಖಾಸಿಂ ಹಾಗೂ ಸಿಬ್ಬಂದಿ ಮಂಚನಾಯಕ್, ಶಿವರಾಜು, ಮನೋಹರ್, ಮಂಜುನಾಥ್ ಭಾಗವಹಿಸಿದ್ದರು.