ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಮೈಸೂರು ಜಿಲ್ಲೆ ಕೆ.ಆರ್.ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಹಿರಿಯ ಕಾಂಗ್ರೇಸ್ ಮುಖಂಡ ಕೆ.ಎಸ್.ಮಹೇಶ್ ನೇಮಕ ಗೊಂಡಿದ್ದಾರೆ.
ಇನ್ನು ಸದಸ್ಯರಾಗಿ ಯುವ ಕಾಂಗ್ರೇಸ್ ಮುಖಂಡ ಕೆ.ಎನ್.ಪ್ರಶನ್ನ, ತಾಲೂಕು ಕಾಂಗ್ರೇಸ್ ವಕ್ತಾರ ಸಯ್ಯದ್ ಜಾಬೀರ್ ಮತ್ತು ಮಹಿಳಾ ಕಾಂಗ್ರೇಸ್ ಮುಖಂಡೆ ಸರಿತಾ ಜವರಪ್ಪ ಅವರನ್ನು ನೇಮಿಸಲಾಗಿದೆ.

ಶಾಸಕ ಡಿ.ರವಿಶಂಕರ್ ಮತ್ತು ಹಿರಿಯ ಕಾಂಗ್ರೇಸ್ ಮುಖಂಡ ದೊಡ್ಡ ಸ್ವಾಮೇಗೌಡ ಅವರ ಶಿಫಾರಸ್ಸಿನ ಮೇರೆಗೆ ಇವರನ್ನು ಅಭಿವೃದ್ಧಿ ಪ್ರಾಧಿಕಾರ ಮತ್ತು ನಯೋಸೇ ನಗರಾಭಿವೃದ್ಧಿ ಪ್ರಾಧಿಕಾರದ ಅಧೀನ ಕಾರ್ಯದರ್ಶಿ ಕೆ.ಲತಾ ಅವರು ಈ ಆದೇಶ ಹೊರಡಿಸಿದ್ದಾರೆ
ನಮ್ಮಪಕ್ಷ ನಿಷ್ಠೆಯನ್ನು ಮನಗೊಂಡು ನಮಗೆ ಈ ಜವಬ್ದಾರಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ಡಿ.ರವಿಶಂಕರ್, ಕಾಂಗ್ರೇಸ್ ಮುಖಂಡರಾದ ದೊಡ್ಡ ಸ್ವಾಮೇಗೌಡ, ಸುನೀತಾ ರವಿಶಂಕರ್ ಅವರಿಗೆ ನೂತನ ಅಧ್ಯಕ್ಷ ಕೆ.ಎಸ್.ಮಹೇಶ್, ಸದಸ್ಯರಾದ ಕೆ.ಎನ್.ಪ್ರಸನ್ನ ಸಯ್ಯದ್ ಜಾಬೀರ್ ಮತ್ತು ಸರಿತಾ ಜವರಪ್ಪ ಕೃತಜ್ಞತೆ ಸಲ್ಲಿಸಿದ್ದಾರೆ.