Friday, April 11, 2025
Google search engine

Homeರಾಜ್ಯಜನತಾ ಪರಿವಾರದ ಹಿರಿಯ ಮುಖಂಡ ಬೆಳಲಗೆರೆ ಹಾಲಸಿದ್ದಪ್ಪ ನಿಧನ

ಜನತಾ ಪರಿವಾರದ ಹಿರಿಯ ಮುಖಂಡ ಬೆಳಲಗೆರೆ ಹಾಲಸಿದ್ದಪ್ಪ ನಿಧನ

ದಾವಣಗೆರೆ: ಜನತಾ ಪರಿವಾರದ ಹಿರಿಯ ಮುಖಂಡ, ಭದ್ರಾ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿದ್ದ ಬೆಳಲಗೆರೆ ಹಾಲಸಿದ್ದಪ್ಪ(92) ನಿಧನರಾಗಿದ್ದಾರೆ.

ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬೆಳಲಗೆರೆ ಹಾಲಸಿದ್ದಪ್ಪ ಅವರು ವಯೋ ಸಹಜ ಕಾಯಿಲೆಯಿಂದ ದಾವಣಗೆರೆ ತಾಲೂಕಿನ ಮಿಡ್ಲಕಟ್ಟೆ ಗ್ರಾಮದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಇವರು ಮಾಜಿ ಸಿಎಂ ಜೆ.ಹೆಚ್.ಪಟೇಲ್, ಮಾಜಿ ಸಚಿವ ಹೆಚ್.ಶಿವಪ್ಪ ಒಡನಾಡಿಯಾಗಿದ್ದರು.

ನಾಲ್ವರು ಪುತ್ರರು, ಮೂವರು ಪುತ್ರಿಯರನ್ನು ಸೇರಿ ಅಪಾರ ಬಂಧು ಬಳಗವನ್ನು ಹಾಲಸಿದ್ದಪ್ಪ ಅಗಲಿದ್ದಾರೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬೆಳಲಗೆರೆ ಗ್ರಾಮದ ತೋಟದಲ್ಲಿ ಇಂದು ಮಧ್ಯಾಹ್ನ ಅಂತ್ಯಸಂಸ್ಕಾರ ನಡೆಯಲಿದೆ.

ಚಿತ್ರದುರ್ಗ ದಾವಣಗೆರೆ ಹಾಗೂ ಶಿವಮೊಗ್ಗ ಭಾಗದಲ್ಲಿ ಜನತಾ ಪರಿವಾರದ ನಾಯಕರಲ್ಲಿ ಹಾಲ ಸಿದ್ದಪ್ಪ ಹೆಸರು‌ ಕೇಳಿ ಬರುತ್ತೆ. ವಿಶೇಷವಾಗಿ ಅಂದಿನ‌ ಕಾಲದ ಶ್ರೇಷ್ಠ ನಾಯಕರಾದ ಶಾಂತವೇರಿ ಗೋಪಾಲಗೌಡ ಅವರ ಒಡನಾಟವಿತ್ತು.‌ ಮಾಜಿ ಸಿಎಂ ದಿವಂಗತ ಜೆಎಚ್ ಪಟೇಲ್ ಅವರ ಸ್ವಗ್ರಾಮ ಕಾರಿಗನೂರು ಹಾಗೂ ಹಾಲ ಸಿದ್ದಪ್ಪ ಅವರ ಬೆಳಲಗೆರೆ ಅಕ್ಕಪಕ್ಕದ ಗ್ರಾಮಗಳು.‌‌‌ ಮೇಲಾಗಿ ಇಬ್ಬರೂ ಸ್ನೇಹಿತರು. ಆಗಿನ ಕಾಲದಲ್ಲಿ ದಾವಣಗೆರೆ ಹಾಗೂ ಚಿತ್ರದುರ್ಗ ಭಾಗದಲ್ಲಿ ಪ್ರಸಿದ್ದಿ ಪಡೆದಿದ್ದು ಹರಿಹರದ ಬಾತಿ ಬಳಿ ಇರುವ ಭದ್ರ ಸಹಕಾರ ಸಕ್ಕರೆ ಕಾರ್ಖಾನೆ.‌ ಇಂತಹ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿ ರೈತರಿಗೆ ಸಹಕಾರಿ ಆಗಿದ್ದರು. ಮಕ್ಕಳು ಸಹ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular