ಮಂಡ್ಯ: ವಿಶ್ವ ಏಡ್ಸ್ ದಿನ ಹಿನ್ನಲೆ ಜಿಲ್ಲಾಡಳಿತ, ಜಿ.ಪಂ.ಹಾಗೂ ಆರೋಗ್ಯ ಇಲಾಖೆ ವತಿಯಿಂದ ಆಯೋಜನೆ ಮಾಡಲಾಗಿದ್ದ ಏಡ್ಸ್ ಜಾಗೃತಿ ಜಾಥಾಗೆ ಹಿರಿಯ ನ್ಯಾಯಾಧೀಶರಾದ ವಾಣಿ ಎ ಶೆಟ್ಟಿ ಚಾಲನೆ ನೀಡಿದರು.
ಇಂದು ಮಂಡ್ಯದ ಸಂಜಯ್ ವೃತ್ತದಲ್ಲಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದ್ದು, ಜಾನಪದ ಕಲಾವಿದರು ಏಡ್ಸ್ ಜಾಗೃತಿ ಮೂಡಿಸಿದರು. ಬಳಿಕ ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮೂಲಕ ಜಾಗೃತಿ ಮೂಡಿಸಲಾಯಿತು.

ಹಿರಿಯ ನ್ಯಾಯಾಧೀಶರಾದ ವಾಣಿ ಎ ಶೆಟ್ಟಿ ಮಾತನಾಡಿ, ಏಡ್ಸ್ ಬಗ್ಗೆ ಎಲ್ಲರು ಸಹ ಜಾಗೃತರಾಗಬೇಕು. ಈ ಸಾಂಕ್ರಾಮಿಕ ರೋಗವನ್ನ ತಡೆಗಟ್ಟಲು ಎಲ್ಲರು ಸಹ ಸಹಕರಿಸಿ. ಏಡ್ಸ್ ಮುಕ್ತ ರಾಜ್ಯ ಮಾಡಬೇಕು ನಾವೆಲ್ಲರೂ ಕೈ ಜೋಡಿಸೋಣ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರಗೃಹದ ಅದೀಕ್ಷಕರು ಲೋಕೇಶ್, ಡಾ.ಆಶಾಲಾತಾ, ಸೇರಿ ಹಲವರು ಭಾಗಿ.