ಮೈಸೂರು: ಸೆಂಕೊ ಗೋಲ್ಡ್ ಲಿಮಿಟೆಡ್(“ಕಂಪನಿ”) ತಲಾ ರೂ. ೧೦ ಮುಖಬೆಲೆಯ (“ಈಕ್ವಿಟಿ ಷೇರುಗಳು”) ಒಟ್ಟು ೪,೦೫೦ ದಶಲಕ್ಷ ಮೌಲ್ಯದ (“ಆಫರ್”) ಈಕ್ವಿಟಿ ಷೇರುಗಳ ಆರಂಭಿಕ ಸಾರ್ವಜನಿಕ ಕೊಡುಗೆಯನ್ನು ಜು.೦೪ರ ಚಂದಾದಾರಿಕೆಗಾಗಿ ತೆರೆಯಲು ಪ್ರಸ್ತಾಪಿಸಿದೆ. ಇದು ರೂ. ೨,೭೦೦ ದಶಲಕ್ಷದವರೆಗಿನ (“ಫ್ರೆಶ್ ಇಶ್ಯೂ”) ಮೌಲ್ಯದ ಈಕ್ವಿಟಿ ಷೇರುಗಳ ಹೊಸ ವಿತರಣೆ ಮತ್ತು ಸೈಫ್ ಪಾರ್ಟ್‌ನರ್ಸ್ ಇಂಡಿಯಾ Iಗಿ ಲಿಮಿಟೆಡ್ ಸಂಸ್ಥೆಯಿಂದ (“ಮಾರಾಟ ಮಾಡುವ ಷೇರುದಾರ”) ರೂ. ೧,೩೫೦ ದಶಲಕ್ಷವರೆಗಿನ ಮೌಲ್ಯದ ಈಕ್ವಿಟಿ ಷೇರುಗಳ ಮಾರಾಟ ಪ್ರಸ್ತಾಪವನ್ನು (ಆಫರ್ ಫಾರ್ ಸೇಲ್) ಒಳಗೊಂಡಿದೆ. ಬಿಡ್ಡಿಂಗ್ ಅವಧಿ ಸೋಮವಾರ, ಜು.೦೩ಆಗಿದೆ. ಈ ಕೊಡುಗೆ ಜು.೦೬ ಕೊನೆಗೊಳ್ಳುತ್ತದೆ.
ಕೊಡುಗೆಯ ‘ಪ್ರೈಸ್ ಬ್ಯಾಂಡ್’ ಅನ್ನು ಪ್ರತಿ ಈಕ್ವಿಟಿಗೆ ರೂ. ೩೦೧ ರಿಂದ ರೂ. ೩೧೭ಕ್ಕೆ ನಿಗದಿಪಡಿಸಲಾಗಿದೆ. ಕನಿಷ್ಠ ೪೭ ಈಕ್ವಿಟಿ ಷೇರುಗಳಿಗೆ ಬಿಡ್ ಮಾಡಬಹುದು ಮತ್ತು ನಂತರ ೪೭ ಈಕ್ವಿಟಿ ಷೇರುಗಳ ಗುಣಕದಲ್ಲಿ ಬಿಡ್ ಮಾಡಬಹುದು.
ಕಂಪನಿಯು ‘ಫ್ರೇಶ್ ಇಶ್ಯೂ’ನಿಂದ ದೊರೆಯುವ ನಿವ್ವಳ ಆದಾಯವನ್ನು ಸಂಸ್ಥೆಯ ದುಡಿಯುವ ಬಂಡವಾಳದ ಅಗತ್ಯಕ್ಕೆ ಧನಸಹಾಯ ನೀಡಲು ಬಳಸಲು ಪ್ರಸ್ತಾಪಿಸಿದೆ. ಇದು ರೂ ೧,೯೬೦ ದಶಲಕ್ಷ ಎಂದು ಅಂದಾಜಿಸಲಾಗಿದೆ ಮತ್ತು ಉಳಿದ ಮೊತ್ತವನ್ನು ಸಾಮಾನ್ಯ ಕಾರ್ಪೊರೇಟ್ ಉದ್ದೇಶಗಳಿಗಾಗಿ ಬಳಸುತ್ತದೆ (“ಕೊಡುಗೆಯ ಉದ್ದೇಶಗಳು”).
ಜೂ.೨೭ರಂದು ಕೋಲ್ಕತಾದಲ್ಲಿರುವ ಪಶ್ಚಿಮ ಬಂಗಾಳದ ‘ರಿಜಿಸ್ಟ್ರಾರ್ ಆಫ್ ಕಂಪನೀಸ್’ಗೆ (“ಆರ್‌ಸಿಸಿ”) ಸಲ್ಲಿಸಿದ ಕಂಪನಿಯ ?ರೆಡ್ ಮತ್ತು ಹೆರಿಂಗ್ ಪ್ರಾಸ್ಪೆಕ್ಟರಸ್? (“ಆರ್‌ಎಚ್‌ಪಿ”) ಮೂಲಕ ಈಕ್ವಿಟಿ ಷೇರುಗಳನ್ನು ನೀಡಲಾಗುತ್ತಿದೆ ಮತ್ತು ಅವುಗಳನ್ನು ?ಬಿಎಸ್‌ಇ ಲಿಮಿಟೆಡ್? (“ಬಿಎಸ್‌ಇ”) ಮತ್ತು ?ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಆಫ್ ಇಂಡಿಯಾ ಲಿಮಿಟೆಡ್?(“ಎನ್‌ಎಸ್‌ಇ”)ನಲ್ಲಿ ಪಟ್ಟಿ ಮಾಡಲು ಪ್ರಸ್ತಾಪಿಸಲಾಗಿದೆ. ಕೊಡುಗೆಯ ಉದ್ದೇಶಗಳಿಗಾಗಿ, ?ಎನ್‌ಎಸ್‌ಇ? ನಿಗದಿತ ಸ್ಟಾಕ್ ಎಕ್ಸ್‌ಚೇಂಜ್ ಆಗಿದೆ.
ಈ ಪ್ರಸ್ತಾಪವನ್ನು ?ಸೆಕ್ಯುರಿಟೀಸ್ ಕಾಂಟ್ರಾಕ್ಟ್ಸ್ (ನಿಯಂತ್ರಣ) ನಿಯಮಗಳು-೧೯೫೭?ರ ನಿಯಮ ೧೯(೨)(ಬಿ) ತಿದ್ದುಪಡಿಯಂತೆ (“ಎಸ್‌ಸಿಆರ್‌ಆರ್”) ಹಾಗೂ ?ಸೆಬಿಯ ನಿಯಂತ್ರಣ ೩೧ ನಿಯಮಗಳು (ಬಂಡವಾಳ ಮತ್ತು ಬಹಿರಂಗ ಅಗತ್ಯಗಳು)-೨೦೧೮?ರ ನಿಯಮಾವಳಿಗಳ ತಿದ್ದುಪಡಿ (?ಸೆಬಿ ಐಸಿಡಿಆರ್ ನಿಯಂತ್ರಣ?) ಪ್ರಕಾರ ಮಾಡಲಾಗಿದೆ. ?ಸೆಬಿ? ಐಸಿಡಿಆರ್ ನಿಬಂಧನೆಗಳ ರೆಗ್ಯುಲೇಶನ್ ೬(೧) ಗೆ ಅನುಗುಣವಾಗಿ, ಬುಕ್ ಬಿಲ್ಡಿಂಗ್ ಪ್ರಕ್ರಿಯೆಯ ಮೂಲಕ ಈ ಕೊಡುಗೆಯನ್ನು ನೀಡಲಾಗುತ್ತಿದೆ. ಇದರಲ್ಲಿ ಕೊಡುಗೆಯ ೫೦% ಮೀರದಂತೆ ?ಅರ್ಹ ಸಾಂಸ್ಥಿಕ ಖರೀದಿದಾರ?ರಿಗೆ (“ಕ್ಯೂಐಬಿಗಳು”) (“ಕ್ಯೂಐಬಿ ಭಾಗ”) ಅನುಪಾತದ ಆಧಾರದ ಮೇಲೆ ಹಂಚಿಕೆ ಮಾಡಲಾಗುವುದು. ನಮ್ಮ ಕಂಪನಿ ಮತ್ತು ?ಸೈಫ್ ಪಾರ್ಟ್‌ನರ್ಸ್ ಇಂಡಿಯಾ Iಗಿ ಲಿಮಿಟೆಡ್? (ಮಾರಾಟ ಷೇರುದಾರರು) ?ಬಿ.ಆರ್.ಎಲ್.ಎಂ.?ಗಳೊಂದಿಗೆ ಸಮಾಲೋಚಿಸಿ (ಕೆಳಗೆ ವ್ಯಾಖ್ಯಾನಿಸಲಾಗಿದೆ) ?ಸೆಬಿ ಐಸಿಡಿಆರ್ ನಿಬಂಧನೆ?ಗಳಿಗೆ (“ಆಂಕರ್ ಹೂಡಿಕೆದಾರರ ಭಾಗ”) ಅನುಗುಣವಾಗಿ ವಿವೇಚನಾ ಆಧಾರದ ಮೇಲೆ ?ಕ್ಯೂಐಬಿ ಭಾಗ?ದ ೬೦% ವರೆಗೆ ಆಂಕರ್ ಹೂಡಿಕೆದಾರರಿಗೆ ಹಂಚಿಕೆ ಮಾಡಬಹುದು. ಅದರಲ್ಲಿ ಮೂರನೇ ಒಂದು ಭಾಗವನ್ನು ದೇಶೀಯ ಮ್ಯೂಚುವಲ್ ಫಂಡ್‌ಗಳಿಗೆ ಮಾತ್ರ ಕಾಯ್ದಿರಿಸಲಾಗುತ್ತದೆ. ಅದರೆ, ಇದು ಸೆಬಿ ಐಸಿಡಿಆರ್ ನಿಬಂಧನೆಗಳಿಗೆ ಅನುಸಾರವಾಗಿ ದೇಶೀಯ ಮ್ಯೂಚುವಲ್ ಫಂಡ್‌ಗಳಿಂದ ಆಂಕರ್ ಹೂಡಿಕೆದಾರರ ಕೊಡುಗೆ ಬೆಲೆಯಲ್ಲಿ ಅಥವಾ ಅದಕ್ಕಿಂತ ಹೆಚ್ಚಿನ ಮಾನ್ಯ ಬಿಡ್‌ಗಳು ಬಂದ ಪಕ್ಷದಲ್ಲಿ ಮಾತ್ರ ಎಂಬ ಷರತ್ತಿಗೆ ಒಳಪಟ್ಟಿರುತ್ತದೆ. ?ಆಂಕರ್ ಹೂಡಿಕೆದಾರರ ಭಾಗ?ದಲ್ಲಿ ಕಡಿಮೆ ಚಂದಾದಾರಿಕೆ ಅಥವಾ ಹಂಚಿಕೆಯಾಗದ ಸಂದರ್ಭದಲ್ಲಿ, ಉಳಿದ ಈಕ್ವಿಟಿ ಷೇರುಗಳನ್ನು ?ನೆಟ್ ಕ್ಯೂಐಬಿ? ಭಾಗಕ್ಕೆ ಸೇರಿಸಲಾಗುತ್ತದೆ. ಇದಲ್ಲದೆ, ?ನಿವ್ವಳ ಕ್ಯೂಐಬಿ? ಭಾಗದ ೫% ಮ್ಯೂಚುವಲ್ ಫಂಡ್‌ಳಿಗೆ ಮಾತ್ರ ಅನುಪಾತದ ಆಧಾರದ ಮೇಲೆ ಹಂಚಿಕೆಗೆ ಲಭ್ಯವಿರುತ್ತದೆ, ಮತ್ತು ?ನಿವ್ವಳ ಕ್ಯೂಐಬಿ? ಭಾಗದ ಉಳಿದ ಭಾಗವು ಮ್ಯೂಚುವಲ್ ಫಂಡ್‌ಗಳು ಸೇರಿದಂತೆ ಎಲ್ಲಾ ?ಕ್ಯೂಐಬಿ? ಬಿಡ್‌ದಾರರಿಗೆ ಅನುಪಾತದ ಆಧಾರದ ಮೇಲೆ ಹಂಚಿಕೆಗೆ ಲಭ್ಯವಿರುತ್ತದೆ. ಆದಾಗ್ಯೂ, ಮ್ಯೂಚುವಲ್ ಫಂಡ್‌ಗಳಿಂದ ಒಟ್ಟು ಬೇಡಿಕೆಯು ?ನಿವ್ವಳ ಕ್ಯೂಐಬಿ ಭಾಗ?ದ ೫% ಕ್ಕಿಂತ ಕಡಿಮೆಯಿದ್ದರೆ, ಮ್ಯೂಚುವಲ್ ಫಂಡ್ ಭಾಗದಲ್ಲಿ ಹಂಚಿಕೆಗೆ ಲಭ್ಯವಿರುವ ಬಾಕಿ ಈಕ್ವಿಟಿ ಷೇರುಗಳನ್ನು ?ಕ್ಯೂಐಬಿ?ಗಳಿಗೆ ಅನುಪಾತದ ಹಂಚಿಕೆಗಾಗಿ ಉಳಿದ ?ನಿವ್ವಳ ಕ್ಯೂಐಬಿ ಭಾಗ?ಕ್ಕೆ ಸೇರಿಸಲಾಗುತ್ತದೆ.
ಇದಲ್ಲದೆ, ಕೊಡುಗೆಯು ಒಟ್ಟು ಪ್ರಮಾಣದ ಶೇ. ೧೫ಕ್ಕಿಂತ ಕಡಿಮೆಯಿಲ್ಲದಂತೆ, ಸಾಂಸ್ಥಿಕೇತರ ಬಿಡ್‌ದಾರರಿಗಾಗಿ ಹಂಚಿಕೆಗೆ ಲಭ್ಯವಿರುತ್ತದೆ. ಅದರಲ್ಲಿ (ಎ) ಅಂತಹ ಭಾಗದ ಮೂರನೇ ಒಂದರಷ್ಟನ್ನು ಎರಡು ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಅರ್ಜಿ ಗಾತ್ರ ಮತ್ತು ಹತ್ತು ಲಕ್ಷ ರೂಪಾಯಿಗಳವರೆಗೆ ಅರ್ಜಿದಾರರಿಗೆ ಕಾಯ್ದಿರಿಸಲಾಗುತ್ತದೆ; ಮತ್ತು (ಬಿ) ಅಂತಹ ಭಾಗದ ಮೂರನೇ ಎರಡರಷ್ಟನ್ನು ಹತ್ತು ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಅರ್ಜಿ ಗಾತ್ರವನ್ನು ಹೊಂದಿರುವ ಅರ್ಜಿದಾರರಿಗೆ ಕಾಯ್ದಿರಿಸಲಾಗುತ್ತದೆ, ಅಂತಹ ಎರಡೂ ಉಪ-ವರ್ಗಗಳಲ್ಲಿ ಚಂದಾದಾರರಾಗದ ಭಾಗವನ್ನು ಸಾಂಸ್ಥಿಕೇತರ ಬಿಡ್‌ದಾರರ ಇತರ ಉಪ-ವರ್ಗದ ಅರ್ಜಿದಾರರಿಗೆ ಹಂಚಿಕೆ ಮಾಡಬಹುದು ಮತ್ತು ?ಸೆಬಿ ಐಸಿಡಿಆರ್ ನಿಬಂಧನೆ?ಗಳಿಗೆ ಅನುಗುಣವಾಗಿ ಕೊಡುಗೆ ಪ್ರಮಾಣದಲ್ಲಿ ಶೇ ೩೫ ಕ್ಕಿಂತ ಕಡಿಮೆಯಿಲ್ಲದಂತೆ ಚಿಲ್ಲರೆ ವೈಯಕ್ತಿಕ ಬಿಡ್‌ದಾರರಿಗೆ (“ಆರ್‌ಐಬಿಗಳು” ) ಹಂಚಿಕೆ ಮಾಡಲು ಲಭ್ಯವಿರುತ್ತದೆ. ಆದರೆ, ಕೊಡುಗೆ ಬೆಲೆಯಲ್ಲಿ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಾನ್ಯ ಬಿಡ್ ಗಳನ್ನು ಸ್ವೀಕರಿಸಿದಾಗ ಮಾತ್ರ ಇದು ಲಭ್ಯವಾಗಲಿದೆ.
ಎಲ್ಲಾ ಸಂಭಾವ್ಯ ಬಿಡ್‌ದಾರರು (ಆಂಕರ್ ಹೂಡಿಕೆದಾರರನ್ನು ಹೊರತುಪಡಿಸಿ) ತಮ್ಮ ಸಂಬಂಧಪಟ್ಟ ?ಎಎಸ್‌ಬಿಎ? ಖಾತೆಗಳ ವಿವರಗಳನ್ನು (ಯುಪಿಐ ಬಿಡ್‌ದಾರರಾಗಿರುವ ಸಂದರ್ಭದಲ್ಲಿ ಯುಪಿಐ ಐಡಿ ಸೇರಿದಂತೆ) ಒದಗಿಸುವ ಮೂಲಕ ?ನಿರ್ಬಂಧಿತ ಮೊತ್ತ ಪ್ರಕ್ರಿಯೆಯಿಂದ ಬೆಂಬಲಿತ ಅರ್ಜಿ? (“ಎಎಸ್‌ಬಿಎ”) ಅನ್ನು ಕಡ್ಡಾಯವಾಗಿ ಬಳಸಬೇಕಾಗುತ್ತದೆ. ಕೊಡುಗೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಒಂದು ವೇಳೆ ಅನ್ವಯವಾಗುವಂತಿದ್ದರೆ, ಸಂಬಂಧಿತ ಬಿಡ್ ಮೊತ್ತಗಳನ್ನು ?ಎಎಸ್‌ಬಿಎ?ನಿಂದ ಅಥವಾ ಯುಪಿಐ ಕಾರ್ಯವಿಧಾನದ ಅಡಿಯಲ್ಲಿ ನಿರ್ಬಂಧಿಸಲಾಗುತ್ತದೆ. ಆಂಕರ್ ಹೂಡಿಕೆದಾರರಿಗೆ ?ಎಎಸ್‌ಬಿಎ? ಪ್ರಕ್ರಿಯೆಯ ಮೂಲಕ ಕೊಡುಗೆಯಲ್ಲಿ ಭಾಗವಹಿಸಲು ಅನುಮತಿ ಇಲ್ಲ. ಹೆಚ್ಚಿನ ವಿವರಗಳಿಗಾಗಿ, ?ಆರ್‌ಎಚ್‌ಪಿ?ಯ ಪುಟ ೪೦೩ ರಲ್ಲಿ “ಕೊಡುಗೆ ಪ್ರಕ್ರಿಯೆ (ಆಫರ್ ಪ್ರೊಸೀಜರ್)” ನೋಡಿ.
?ಐಐಎಫ್‌ಎಲ್ ಸೆಕ್ಯುರಿಟೀಸ್ ಲಿಮಿಟೆಡ್?, ?ಆಂಬಿಟ್ ಪ್ರೈವೇಟ್ ಲಿಮಿಟೆಡ್? ಮತ್ತು ?ಎಸ್‌ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್? ಈ ಕೊಡುಗೆಗೆ ಬುಕ್ ರನ್ನಿಂಗ್ ಲೀಡ್ ಮ್ಯಾನೇಜರ್ಗಳು (“ಬಿ.ಆರ್.ಎಲ್.ಎಂ.ಗಳು”).