Friday, April 4, 2025
Google search engine

Homeಸ್ಥಳೀಯಎಸ್ಇಪಿ, ಟಿಎಸ್ಪಿ ಹಣ ದುರುಪಯೋಗ ಆರೋಪ:ಪ್ರತಿಭಟನೆ

ಎಸ್ಇಪಿ, ಟಿಎಸ್ಪಿ ಹಣ ದುರುಪಯೋಗ ಆರೋಪ:ಪ್ರತಿಭಟನೆ

ಮೈಸೂರು: ಕರ್ನಾಟಕ ರಾಜ್ಯ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಾಗಿ ಎಸ್ಇಪಿ, ಟಿಎಸ್ಪಿ ಹಣವನ್ನು ಬಳಸಿಕೊಂಡಿರುವ ಸರ್ಕಾರದ ಈ ನಡೆಯನ್ನು ಖಂಡಿಸಿ ಇಂದು ಮೈಸೂರು ವಿಶ್ವವಿದ್ಯಾನಿಲಯದ ಸಂಘದ ವತಿಯಿಂದ ಸುಮಾರು ನೂರಾರು ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಸೇರಿ ಸರ್ಕಾರ ವಿರುದ್ಧ ಪ್ರತಿಭಟನೆಯನ್ನು ಮಾಡಲಾಯಿತು. ಈ ಪ್ರತಿಭಟನೆಯಲ್ಲಿ

  1. 7ಸಿ ಕಾಯ್ದೆಯನ್ನು ರದ್ದುಪಡಿಸಬೇಕು.
  2. ಎಸ್ಇಪಿ, ಟಿಎಸ್ಪಿ ಹಣವನ್ನು ದಲಿತರ ಆರ್ಥಿಕ ಅಭಿವೃದ್ಧಿಗೆ ಮಾತ್ರ ಬಳಸಬೇಕು.
  3. ಪರಿಶಿಷ್ಟ ಜಾತಿ ಪಂಗಡಗಳ ಪ್ರಭುದ್ಧ ಯೋಜನೆ, ಪ್ರೋತ್ಸಾಹ ಧನ ಇತರ ದಲಿತರ ಯೋಜನೆಗಳನ್ನು ಹಿಂದಿನಂತೆ ರೀತಿಯಲ್ಲಿ ಮುಂದುವರಿಸಬೇಕೆಂದು ಆಗ್ರಹಿಸಲಾಯಿತು.

ಈ ಪ್ರತಿಭಟನೆಯಲ್ಲಿ ಸಂಶೋಧಕರ ಸಂಘದ ಅಧ್ಯಕ್ಷ ಶಿವ ಶಂಕರ, ಉಪಾಧ್ಯಕ್ಷರ ಮಲ್ಲೇಶ್ ಕೆ, ಗೌರವಾಧ್ಯಕ್ಷರಾದ ಮಹೇಶ್, ಪ್ರಧಾನ ಕಾರ್ಯದರ್ಶಿ ಕುಶಾಲ್, ಕಲ್ಲಹಳ್ಳಿ ಕುಮಾರ್, ರಂಗಸ್ವಾಮಿ ಕೆ. ಆರ್, ಮಹೇಶ ಪಿ.ಮರಳ್ಳಿ , ವಜ್ರಮುನಿ, ವರಹಳ್ಳಿ ಆನಂದ, ಸುಪ್ರೀತ್, ಲೋಕೇಶ್, ಸಂಜಯ್, ಜಯ, ಕಾರ್ತೀಕ, ಅಸ್ಕರ್ ಅಲಿ, ಪ್ರತಾಪ್, ನಟರಾಜ್, ದಿಲೀಪ್, ಗಣೇಶ್, ಜಗದೀಶ್ ಮಹದೇವಯ್ಯ, , ದಲಿತ ವಿಧ್ಯಾರ್ಥಿ ಪರಿಷತ್ ನ ಜಿಲ್ಲಾ ಅಧ್ಯಕ್ಷ ವಿಶ್ವ ಪ್ರಸಾದ್, ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾದ ಸಚಿನ್ ರೋಹಿತ್, ಮುತ್ತುರಾಜ್ ಇನ್ನಿತರರು ಹಾಜರಿದ್ದರು.


RELATED ARTICLES
- Advertisment -
Google search engine

Most Popular